ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. 17 ಪಂದ್ಯಗಳನ್ನು ವಿದೇಶದಲ್ಲಿ ಆಡಿದ ಬಳಿಕ ತವರಿನಲ್ಲಿ ಮೊದಲ ಬಾರಿಗೆ ಈ ಅವಕಾಶವನ್ನು ಪಡೆದಿದ್ದಾರೆ ಬೂಮ್ರ. ಈ ಪಂದ್ಯದಲ್ಲಿ ತಮ್ಮ ಅದ್ಭುತ ಬೌಲಿಂಗ್ ದಾಳಿಯ ಮೂಲಕ ಮೊದಲ ವಿಕೆಟ್ ಕಿತ್ತು ತಂಡಕ್ಕೆ ಮೇಲುಗೈ ಒದಗಿಸಿದರು.

ಇಂಗ್ಲೆಂಡ್ ತಂಡ 63 ನ್ ಗಳಿಸಿದ ವೇಳೆ ಆರಂಭಿಕ ಆಟಗಾರ ರೋರಿ ಬರ್ನ್ಸ್ ವಿಕೆಟ್ ಕಳೆದುಕೊಂಡಿತು. ಅಶ್ವಿನ್ ಎಸೆತ ಎಸೆತದಲ್ಲಿ ಬರ್ನ್ಸ್ ವಿಕೆಟ್‌ ಕೀಪರ್ ರಿಷಭ್ ಪಂತ್‌ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು. ಅದಾದ ಬಳಿಕ ಕ್ರೀಸ್‌ಗೆ ಇಳಿದ ಲಾರೆನ್ಸ್‌ಗೆ ಖಾತೆ ತೆರೆಯುವ ಮುನ್ನವೇ ಬೂಮ್ರಾ ಫೆವಿಲಿಯನ್ ಹಾದಿ ತೋರಿಸಿದರು.

Edited By : Nagaraj Tulugeri
PublicNext

PublicNext

05/02/2021 04:04 pm

Cinque Terre

41.43 K

Cinque Terre

0

ಸಂಬಂಧಿತ ಸುದ್ದಿ