ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎಂ.ಎಸ್.ಧೋನಿ ನಾಯಕತ್ವದಲ್ಲಿಯೇ ಕಣಕ್ಕಿಳಿಯಲಿದೆ.
ಚೆನ್ನೈ ಈ ಬಾರಿ ಧೋನಿ ಅವರನ್ನು ಕೈಬಿಡುತ್ತೆ ಎನ್ನುವ ಚರ್ಚೆ ಶುರುವಾಗಿತ್ತು. ಆದರೆ ಈ ಚರ್ಚೆಗೆ ಸ್ವತಃ ಎಂ.ಎಸ್.ಧೋನಿ ಹಾಗೂ ಚೆನ್ನೈ ಫ್ರಾಂಚೈಸಿ ಸ್ಪಷ್ಟನೆದ್ದಾರೆ. ಈ ಮೂಲಕ ಧೋನಿಯೇ ತಂಡವನ್ನು ಮುನ್ನಡೆಸುವುದು ಖಾತ್ರಿಯಾಗಿದೆ. ಇದೀಗ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಸಂಭಾವನೆಯ ವಿಚಾರದಲ್ಲಿ ವಿಶೇಷ ಮೈಲಿಗಲ್ಲೊಂದನ್ನು ದಾಟಲಿದ್ದಾರೆ.
ಎರಡು ವರ್ಷಗಳ ಕಾಲ ಚೆನ್ನೈ ತಂಡದ ಅಮಾನತು ಹೊರತು ಪಡಿಸಿದರೆ ಎಂಎಸ್ ಧೋನಿ 2008ರಿಂದಲೂ ಚೆನ್ನೈ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿನ ಸಂಭಾವನೆಯನ್ನು ಪಡೆಯುವ ಮೂಲಕ ಧೋನಿ ಐಪಿಎಲ್‌ನಲ್ಲಿ 150 ಕೋಟಿ ರೂಪಾಯಿ ಸಂಭಾವನೆಯನ್ನು ಗಳಿಸಿದ ಆಟಗಾರ ಎನಿಸಲಿದ್ದಾರೆ. ಈ ವಿಶೇಷ ಸಾಧನೆಯನ್ನು ಮಾಡಿದ ಏಕೈಕ ಆಟಗಾರ ಎನಿಸಲಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಕೂಡ 2008ರಿಂದ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಈ ಬಾರಿಯ ಆವೃತ್ತಿಯ ಸಂಭಾವನೆ ಸೇರಿಸಿದರೆ ಕೊಹ್ಲಿ 143.2 ಕೋಟಿ ಆದಾಯವನ್ನು ಐಪಿಎಲ್‌ನಿಂದ ಗಳಿಸಿದಂತಾಗಲಿದೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐಪಿಎಲ್‌ನ ಆದಾಯ ಈ ಬಾರಿ 146.6 ಕೋಟಿಗೆ ಏರಿಕೆಯಾಗಲಿದೆ.
PublicNext
02/02/2021 04:49 pm