ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಟೀಂ ಇಂಡಿಯಾ ಗೆಲುವಿಗೆ ಮಹತ್ವದ ಪಾತ್ರ ವಹಿಸಿದ್ದ ವೇಗಿಟಿ. ನಟರಾಜನ್ ತಮ್ಮ ಮುಡಿಯನ್ನು ದೇವರಿಗೆ ಕೊಟ್ಟು ಹರಕೆ ತೀರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾದರೆ ಮುರುಗಸ್ವಾಮಿಗೆ ತಲೆಯ ಮುಡಿ ಕೊಡುವುದಾಗಿ ಹರಕೆ ಹೇಳಿಕೊಂಡಿದ್ದರು. ಇದರಂತೆ ನಟರಾಜನ್ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ನಟರಾಜನ್ ಮಧುರೈ ಜಿಲ್ಲೆಯ ಪಳನಿಯ ದಂಡಾಯುಧಪಾಣಿ ದೇವಸ್ಥಾನದಲ್ಲಿರುವ ಮುರುಗಸ್ವಾಮಿಯ ದರ್ಶನ ಮಾಡಿ ಹರಕೆಯ ಪ್ರಕಾರ ತಲೆ ಬೋಳಿಸಿ ಮುಡಿಕೊಟ್ಟಿದ್ದಾರೆ.
ಟಿ. ನಟರಾಜನ್ ಅವರು ದೇವಾಲಯಕ್ಕೆ ಬರುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ಅಭಿಮಾನಿಗಳು ದೇವಸ್ಥಾನದಲ್ಲಿ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡರು.
PublicNext
31/01/2021 05:39 pm