ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫ್ಯಾಕ್ಟ್ ಚೆಕ್: ಕಾರು ಅಪಘಾತದಲ್ಲಿ ಪೊಲಾರ್ಡ್ ನಿಧನ ಶುದ್ಧ ಸುಳ್ಳು

ವೆಸ್ಟ್ ಇಂಡೀಸ್ ಕ್ರಿಕೆಟರ್ ಕೀರನ್ ಪೊಲಾರ್ಡ್ ಅಬುಧಾಬಿಯ ಟಿ10 ಲೀಗ್‌ನಲ್ಲಿ ಆಡುತ್ತಿದ್ದಾರೆ. ಆದರೆ ಆಲ್ ರೌಂಡರ್ ಕಾರು ಅಪಘಾತಕ್ಕೀಡಾಗಿದೆ ಎಂಬ ನಕಲಿ ವಿಡಿಯೋ ಯೂಟ್ಯೂಬ್ ಹಾಗೂ ಕೆಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ನಕಲಿ ವಿಡಿಯೋ, ಸುದ್ದಿಗಳು ವೈರಲ್ ಆಗಿದ್ದಾಗ ಪೊಲ್ಲಾರ್ಡ್ ಅಬುಧಾಬಿ ಟಿ10 ಲೀಗ್‌ನ ಎರಡನೇ ಪಂದ್ಯದಲ್ಲಿ ಪುಣೆ ಡೆವಿಲ್ಸ್ ವಿರುದ್ಧ ಡೆಕ್ಕನ್ ಗ್ಲಾಡಿಯೇಟರ್ಸ್ ಪರ ಆಡುತ್ತಿದ್ದರು. ವಿಚಿತ್ರವೆಂದರೆ ಪೊಲಾರ್ಡ್ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ನಾಯಕನಾಗಿದ್ದು, ಇಂದಿನ ಪಂದ್ಯದ ಇನ್ನಿಂಗ್ಸ್‌ನ ಮೊದಲು ಆರು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ವಿಕೆಟ್‌ ಕಳೆದುಕೊಂಡರು.

Edited By : Vijay Kumar
PublicNext

PublicNext

28/01/2021 10:59 pm

Cinque Terre

66.94 K

Cinque Terre

11

ಸಂಬಂಧಿತ ಸುದ್ದಿ