ಬಳ್ಳಾರಿ: ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಶನಿವಾರ ಬಳ್ಳಾರಿ ಬಳಿಯ ತೋರಣಗಲ್ ಜಿಂದಾಲ್ ಸಮೂಹ ಸಂಸ್ಥೆಗೆ ಭೇಟಿ ನೀಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಟೆಸ್ಟ್ ಪಂದ್ಯದಲ್ಲಿ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿತ್ತು. ಮೂರನೇ ಟೆಸ್ಟ್‌ಗೂ ಮುನ್ನ ಗಾಯಗೊಂಡ ಕೆ.ಎಲ್.ರಾಹುಲ್ ತವರಿಗೆ ವಾಪಸ್ ಆಗಿದ್ದರು.
ಕೆ.ಎಲ್.ರಾಹುಲ್ ಇತ್ತೀಚೆಗಷ್ಟೇ ಜಿಂದಾಲ್ ಸಮೂಹ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಜಾಹೀರಾತು ಶೂಟಿಂಗ್‌ಗಾಗಿ ಬಳ್ಳಾರಿಗೆ ಬಂದಿದ್ದು, ಇನ್ನೂ ಮೂರು ದಿನ ಇಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ.
PublicNext
24/01/2021 08:49 am