ಕೊಯಮತ್ತೂರು: ದೈತ್ಯ ಜಾಹೀರಾತು ಫಲಕಗಳು, ಕುದುರೆ ಎಳೆಯುವ ರಥ, ಎಲ್ಲಕ್ಕಿಂತ ಹೆಚ್ಚಾಗಿ ಉತ್ಸಾಹಭರಿತ ಯುವಕರು. ಈ ಸನ್ನಿವೇಶ ಕಂಡು ಬಂದಿದ್ದು ಟೀಂ ಇಂಡಿಯಾ ಯುವ ಬೌಲರ್ ಟಿ.ನಟರಾಜನ್ ಅವರ ಸ್ವಾಗತದ ವೇಳೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಟಿ.ನಟರಾಜನ್ ಅವರು ಇಂದು ತಮ್ಮ ಹುಟ್ಟೂರು ಸೇಲಂನಿಂದ 40 ಕಿ.ಮೀ ದೂರದಲ್ಲಿರುವ ಚಿನ್ನಪ್ಪಂಪಟ್ಟಿಗೆ ವಾಪಸ್ ಆದರು. ಈ ವೇಳೆ ಅವರಿಗೆ ಅದ್ಧೂರಿ ಸ್ವಾಗತವೇ ಕಾದಿತ್ತು.
ಬೆಂಗಳೂರಿನಿಂದ ತಮ್ಮ ಹುಟ್ಟೂರು ಚಿನ್ನಪ್ಪಂಪತ್ತಿಗೆ ಬಂದ ನಟರಾಜನ್ ಅವರನ್ನು ಗ್ರಾಮದ ಹೊರವಲಯದಲ್ಲಿ ನಿಲ್ಲಿಸಲಾಯಿತು. ಬಳಿಕ ಪಟಾಕಿ ಸಿಡಿಸುತ್ತಿದ್ದಂತೆ, ಹಳ್ಳಿಯ ಮಹಿಳೆಯರು ಆರತಿಯನ್ನು ತೆಗೆದುಕೊಂಡು ಬಂದರು. ಇತ್ತ ಯುವಕರು ಹೂವಿನ ಹಾರ, ಕಿರೀಟ ಹಿಡಿದು ಬಂದರು. ಈ ವೇಳೆ ಕುದುರೆ ರಥವನ್ನು ಹತ್ತಿದ ನಟರಾಜನ್ ಅವರನ್ನು ಮೆರವಣಿಗೆ ಮೂಲಕ ಮನೆಗೆ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಚಿನ್ನಪ್ಪಂಪಟ್ಟಿಯ ಯುವಕರು ಮತ್ತು ನೆರೆಯ ಹಳ್ಳಿಗರು ತಮ್ಮ ಕ್ರಿಕೆಟ್ ಐಕಾನ್ ಅನ್ನು ಸ್ವಾಗತಿಸಲು ಬಂದಿದ್ದರು.
PublicNext
21/01/2021 08:43 pm