ಬ್ರಿಸ್ಬೇನ್: ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಭಾರತ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ನಿರ್ಣಾಯಕ ಪಂದ್ಯವಾಗಿದೆ. ಈಗಾಗಲೇ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ ನಾಲ್ಕನೇ ದಿನದಾಟದ ಭೋಜನ ವಿರಾಮದ ಹೊತ್ತಿಗೆ 41 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 33 ರನ್‌ಗಳ ಮಹತ್ವದ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಒಟ್ಟು ಮುನ್ನಡೆಯನ್ನು 182 ರನ್‌ಗಳಿಗೆ ಏರಿಸಿದೆ. ಈಗ ಕ್ರೀಸಿನಲ್ಲಿರುವ ಸ್ಟೀವನ್ ಸ್ಮಿತ್ 28 ರನ್ ಹಾಗೂ ಕ್ಯಾಮರಾನ್ ಗ್ರೀನ್ 4 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೀಂ ಇಂಡಿಯಾ ಯುವ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಠಾಕೂರ್ ಎರಡು ಹಾಗೂ ಸುಂದರ್ ಒಂದು ವಿಕೆಟ್ ಪಡೆದರು. ಬಳಿಕ ಸಿರಾಜ್ ಒಂದೇ ಓವರ್‌ನಲ್ಲಿ ಮಾರ್ನಸ್ ಲಾಬುಷೇನ್ (25 ರನ್) ಹಾಗೂ ಮ್ಯಾಥ್ಯೂ ವೇಡ್ (0 ರನ್) ಹೊರದಬ್ಬಿದರು.
PublicNext
18/01/2021 08:00 am