ಬ್ರಿಸ್ಬೇನ್: ಟೀಂ ಇಂಡಿಯಾದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರ ತಾಳ್ಮೆಯ ಶತಕದ ಜೊತೆಯಾಟಕ್ಕೆ ನಾಯಕ ವಿರಾಟ್ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಎಲ್ಲ ವಿಕೆಟ್ ಕಳೆದುಕೊಂಡು 336 ರನ್ ಗಳಿಸಿದೆ. ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಜೋಡಿಯು 7ನೇ ವಿಕೆಟ್‌ಗೆ 217 ಎಸೆತಗಳಲ್ಲಿ 123 ರನ್‌ಗಳ ಅದ್ಭುತ ಜೊತೆಯಾಟವನ್ನು ನೀಡಿದರು. ಈ ಮೂಲಕ ಪಂದ್ಯದಲ್ಲಿ ಭಾರತಕ್ಕೆ ಆಸರೆಯಾದರು. ಈ ಜೋಡಿ ಕಣಕ್ಕಿಳಿಯುವ ವೇಳೆಗೆ ಭಾರತ ತಂಡ 186 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, "ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಇದು ನಿಮ್ಮಿಂದ ನಂಬಿಕಾರ್ಹ ಹಾಗೂ ಶ್ರೇಷ್ಠವಾದ ಪ್ರದರ್ಶನ. ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠತೆಯೇ ಇದು. ಮೊದಲ ಪಂದ್ಯದಲ್ಲೇ ಸುಂದರ್ ಅದ್ಭುತವಾದ ಹಿಡಿತ ಸಾಧಿಸಿದ್ದಾರೆ ಮತ್ತು ಹ್ಯಾಟ್ಸ್‌ಆಫ್ ಟು ಯೂ ಠಾಕೂರ್" ಎಂದು ಹೊಗಳಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ:
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 115.5 ಓವರ್‌ಗಳಲ್ಲಿ 369.
ಭಾರತ: ಪ್ರಥಮ ಇನಿಂಗ್ಸ್ 111.4 ಓವರ್‌ಗಳಲ್ಲಿ 336.
ಆಸ್ಟ್ರೇಲಿಯಾ: ಎರಡನೇ ಇನ್ನಿಂಗ್ಸ್ 6 ಓವರ್‌ಗಳಲ್ಲಿ 21.
PublicNext
17/01/2021 03:06 pm