ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಕೊನೆಯ (ನಾಲ್ಕನೇ) ಟೆಸ್ಟ್ ಪಂದ್ಯವು ಇಂದು ದಿ ಗಬ್ಬಾ ಕ್ರಿಕೆಟ್ ಗ್ರೌಂಡ್ನಲ್ಲಿ ಆರಂಭವಾಗಿದೆ. ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಮಾರ್ನಸ್ ಲಾಬುಶೇನ್ ಅವರ ಆಕರ್ಷಕ ಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 87 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 274 ರನ್ ದಾಖಲಿಸಿದೆ.
ಆಸೀಸ್ ಪರ ಡೇವಿಡ್ ವಾರ್ನರ್ 1 ರನ್, ಮಾರ್ಕಸ್ ಹ್ಯಾರಿಸ್ 5 ರನ್, ಮಾರ್ನಸ್ ಲಾಬುಶೇನ್ 108 ರನ್, ಸ್ಟೀವ್ ಸ್ಮಿತ್ 36 ರನ್ ಹಾಗೂ ಮ್ಯಾಥ್ಯೂ ವೇಡ್ 45 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಸದ್ಯ ಕ್ರೀಸ್ನಲ್ಲಿ ನಾಯಕ ಟಿಮ್ ಪೈನ್(38) ಹಾಗೂ ಕಾಮೆರನ್ ಗ್ರೀನ್(28) ಇದ್ದು ನಾಳೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೀಂ ಇಂಡಿಯಾ ಯುವ ವೇಗಿಗಳು ಇಂದು ಮಿಂಚಿದ್ದಾರೆ. ಟಿ. ನಟರಾಜನ್ ಎರಡು ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
PublicNext
15/01/2021 03:18 pm