ಮುಂಬೈ: ಸುದೀರ್ಘ 7 ವರ್ಷಗಳ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿರುವ ವೇಗದ ಬೌಲರ್ ಎಸ್.ಶ್ರೀಶಾಂತ್ ಆಡಿದ ಮೊದಲ ಪಂದ್ಯದಲ್ಲೇ ವಿಕೆಟ್ ಕಿತ್ತು ಮಿಂಚಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದೆ.
2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ಶ್ರೀಶಾಂತ್ ಮತ್ತೆ ಕ್ರಿಕೆಟ್ಗೆ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡದ ಪರ ಶ್ರೀಶಾಂತ್ ಕಣಕ್ಕಿಳಿದಿದ್ದು, ಪುದುಚೆರಿ ವಿರುದ್ಧದ ಪಂದ್ಯದಲ್ಲಿ ತಾವು ಎಸೆದ ಎರಡನೇ ಓವರ್ನಲ್ಲೇ ವಿಕೆಟ್ ಕಿತ್ತು ಮಿಂಚಿದರು.
ಈ ಪಂದ್ಯದಲ್ಲಿ ಒಟ್ಟು ನಾಲ್ಕು ಓವರ್ ಬೌಲಿಂಗ್ ಮಾಡಿದ ಶ್ರೀಶಾಂತ್ 29 ರನ್‌ಗಳನ್ನಷ್ಟೇ ನೀಡಿ ಒಂದು ವಿಕೆಟ್ ಪಡೆದರು. ಅಲ್ಲದೆ ತನ್ನ 4 ಓವರ್ ಮುಗಿಯುತ್ತಿದ್ದಂತೆ ಪಿಚ್ ಬಳಿ ಬಂದು ಧನ್ಯವಾದ ಹೇಳಿ ನಮಸ್ಕರಿಸಿದರು.
PublicNext
12/01/2021 09:49 pm