ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಿನಂತ ಹೋಟೆಲ್‌- ಟೀಂ ಇಂಡಿಯಾ ಆಟಗಾರರೇ ಖುದ್ದಾಗಿ ಟಾಯ್ಲೆಟ್ ಕ್ಲೀನ್ ಮಾಡಿಕೊಳ್ಳುವ ಪರಿಸ್ಥಿತಿ

ಬ್ರಿಸ್ಬೇನ್: ಆಸ್ಟ್ರೇಲಿಯಾದ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಇರುವ ಹೋಟೆಲ್‌ ಜೈಲಿನ ಅನುಭವ ನೀಡುವಂತಾಗಿದೆ. ಅಷ್ಟೇ ಅಲ್ಲದೆ ಆಟಗಾರರೇ ಖುದ್ದಾಗಿ ಟಾಯ್ಲೆಟ್ ಕ್ಲೀನ್ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

ಟೀಂ ಇಂಡಿಯಾ ಈಗಾಗಲೇ 2 ತಿಂಗಳ ಕಾಲ ಆಸ್ಟ್ರೇಲಿಯಾದಲ್ಲಿ ಇರುವುದರಿಂದ ತಮ್ಮ ವಿರುದ್ಧ ಇಷ್ಟು ಕಟ್ಟು ನಿಟ್ಟಿನ ಕ್ವಾರಂಟೈನ್ ನಿಯಮಗಳನ್ನು ಹೇರುವ ಅಗತ್ಯವಿಲ್ಲ ಎಂದು ಹೇಳಿತ್ತು. ಆದರೆ ಇದಕ್ಕೆ ಕಟುವಾಗಿ ಉತ್ತರಿಸಿದ್ದ ಕ್ವೀನ್ಸ್‌ಲ್ಯಾಂಡ್‌ನ ಆರೋಗ್ಯ ಸಚಿವೆ, ನಿಯಮಗಳನ್ನು ಪಾಲಿಸುವುದಿದ್ದರೆ ಮಾತ್ರವೇ ಕ್ವೀನ್ಸ್‌ಲ್ಯಾಂಡ್‌ಗೆ ಬನ್ನಿ ಇಲ್ಲದಿದ್ದರೆ ಬರಬೇಡಿ ಎಂದಿದ್ದರು. ಇದರಿಂದಾಗಿ ಭಾರತ ತಂಡ ಈ ಪಂದ್ಯವನ್ನು ಬಹಿಷ್ಕರಿಸಲಿದೆ ಎಂದೇ ಸುದ್ದಿಯಾಗಿತ್ತು. ಆದರೀಗ ಪರಿಸ್ಥಿತಿ ಸುಧಾರಿಸಿ, ನಾಲ್ಕನೇ ಟೆಸ್ಟ್‌ ಗಬ್ಬಾ ಕ್ರೀಡಾಂಗಣದಲ್ಲೇ ನಡೆಯಲಿದ್ದು, ಟೀಮ್ ಇಂಡಿಯಾ ಬ್ರಿಸ್ಬೇನ್‌ ತಲುಪಿಯಾಗಿದೆ.

ಬ್ರಿಸ್ಬೇನ್‌ಗೆ ತೆರಳಿರುವ ಟೀಂ ಇಂಡಿಯಾಗೆ ಸಮಸ್ಯೆಗಳು ಕಡಿಮೆಯಾಗಿಲ್ಲ. ಗಬ್ಬಾ ಕ್ರೀಡಾಂಗಣಕ್ಕೆ 4 ಕಿ.ಮೀ ಸಮೀಪದಲ್ಲಿ ಇರುವ ಸೋಫಿಟೆಲ್ ಪಂಚತಾರ ಹೋಟೆಲ್‌ನಲ್ಲಿ ಭಾರತ ತಂಡವು ಉಳಿದುಕೊಂಡಿದೆ. ಈ ಹೋಟೆಲ್ ಅಕ್ಷರಶಃ ಜೈಲಿನಂತ್ತಿದೆ ಎಂದು ಟೀಂ ಇಂಡಿಯಾ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಈ ಬಗ್ಗೆ ಟೀಂ ಇಂಡಿಯಾದ ಸದಸ್ಯರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, "ನಮ್ಮೆಲ್ಲರನ್ನೂ ರೂಮ್‌ಗಳಲ್ಲಿ ಕೂಡಿಹಾಕಲಾಗಿದೆ. ನಮ್ಮ ಬೆಡ್‌ಗಳನ್ನು ನಾವೇ ಸಿದ್ಧಪಡಿಸಿಕೊಳ್ಳಬೇಕು. ಟಾಯ್ಲೆಟ್ ಕೂಡ ನಾವೇ ವಾಶ್ ಮಾಡಿಕೊಳ್ಳಬೇಕು. ಊಟದ ವಿಚಾರದಲ್ಲಿ ಹತ್ತಿರದ ಭಾರತೀಯ ರೆಸ್ಟೋರೆಂಟ್‌ನಿಂದ ತರಿಸಲಾಗುತ್ತಿದೆ. ಅದನ್ನು ನಾವಿರುವ ಮಾಳಿಗೆಗಳಲ್ಲಿ ಇರಿಸುತ್ತಾರೆ. ಪ್ರತಿಯೊಬ್ಬರೂ ಅವರು ಇರುವ ಮಾಳಿಗೆಯನ್ನು ಬಿಟ್ಟು ಬೇರೆಡೆಗೆ ಹೋಗುವಂತ್ತಿಲ್ಲ. ಜಿಮ್ ಮತ್ತು ಈಜುಕೊಳವನ್ನೂ ನಾವು ಬಳಸುವಂತ್ತಿಲ್ಲ. ಸಂಪೂರ್ಣ ಖಾಲಿ ಇರುವ ಹೋಟೆಲ್ ಇದು. ಇಲ್ಲಿನ ಎಲ್ಲಾ ಕೆಫೆ ಮತ್ತು ರೆಸ್ಟೋರೆಂಟ್‌ಗಳು ಮುಚ್ಚಿವೆ" ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

12/01/2021 09:20 pm

Cinque Terre

74.33 K

Cinque Terre

5

ಸಂಬಂಧಿತ ಸುದ್ದಿ