ಸಿಡ್ನಿ: ಆಸ್ಟ್ರೇಲಿಯಾದ ಕೆಲ ಆಟಗಾರರು ಚೆಂಡು ವಿರೂಪಗೊಳಿಸಿ, ಸ್ಲೆಡ್ಜಿಂಗ್ ಮಾಡಿ ಎದುರಾಳಿ ಆಟಗಾರರನ್ನು ಔಟ್ ಮಾಡುವ ಕುತಂತ್ರ ಎಲ್ಲರಿಗೂ ಗೊತ್ತಿರುವ ವಿಚಾರ. ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹೊಸ ಕುತಂತ್ರದ ಮೂಲಕ ಟೀಂ ಇಂಡಿಯಾದ ರಿಷಬ್ ಪಂತ್ ಔಟಾಗಲು ಕಾರಣವಾಗಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ರಿಷಬ್ ಪಂತ್ ಅದ್ಭುತ ಬ್ಯಾಟಿಂಗ್ ಮಾಡಿದರು. ಡ್ರಿಂಕ್ಸ್ ಬ್ರೇಕ್‌ನಲ್ಲಿ ಸ್ಟೀವ್ ಸ್ಮಿತ್ ಬಂದು ಕ್ರೀಸ್ ಮಾರ್ಕ್ ಅನ್ನು ಬದಲಾಯಿಸುತ್ತಿರುವ ದೃಶ್ಯಗಳು ವಿಕೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಂದ್ಯ ಸೋಲುವ ಭೀತಿ ಹಿನ್ನೆಲೆಯಲ್ಲಿ ಸ್ಮಿತ್ ಅವರು ಪಂತ್ ಅವರನ್ನು ಔಟ್ ಮಾಡಬೇಕು ಎಂಬ ದುರುದ್ದೇಶ ಹೊಂದಿದ್ದರು. ಈ ಹಿನ್ನೆಲೆ ಸ್ಟ್ರೈಕಿಂಗ್ ಪಾಯಿಂಟ್ ಬಳಿ ಬಂದ ಸ್ಮಿತ್ ಪಂತ್ ಗುರುತು ಮಾಡಿದ್ದ ಬ್ಯಾಟಿಂಗ್ ಮಾರ್ಕ್ ಅನ್ನು ಅಳಿಸಿ ಬೇರೆ ಗೆರೆ ಎಳೆದಿದ್ದಾರೆ. ಸ್ಮಿತ್ ಈ ಕುತಂತ್ರ ಸ್ಟಂಪ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
11/01/2021 03:09 pm