ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿದೆ. ಈ ಫಲಿತಾಂಶವು ಟೀಂ ಇಂಡಿಯಾ ಪಡೆಯಲ್ಲಿ ಸಂತಸ ತಂದಿದೆ.
ಸೋಲಿನ ಸಮೀಪದಲ್ಲಿದ್ದ ಭಾರತವನ್ನು ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ರಿಷಬ್ ಪಂತ್ ಅರ್ಧ ಶತಕ ಮತ್ತು ರವಿಚಂದ್ರನ್ ಅವರ ಸಮಯೋಚಿತ ಬ್ಯಾಟಿಂಗ್ ಹಾಗೂ ಸರಣಿಯಲ್ಲಿ ಕಳಪೆ ನಿರ್ವಹಣೆ ತೋರಿದ್ದ ಹನುಮ ವಿಹಾರಿ ಸಿಡಿಯದೆ, ಕೆಟ್ಟ ಹೊಡೆತಕ್ಕೆ ಕೈ ಹಾಕದೆ ಚಾಣಾಕ್ಷ ಆಟ ಆಡಿದರು.
ಸಂಕ್ಷಿಪ್ತ ಸ್ಕೋರ್ ವಿವರ:
ಆಸ್ಟ್ರೇಲಿಯಾ: ಮೊದಲ ಇನ್ನಿಂಗ್ಸ್‌ನಲ್ಲಿ 105.4 ಓವರ್‌ಗೆ 338/10
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 100.4 ಓವರ್‌ಗೆ 244/10
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 87 ಓವರ್‌ಗೆ 312/6 (ಡಿಕ್ಲೇರ್)
ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 131 ಓವರ್‌ಗೆ ಭಾರತ 334/5
ಮೂರನೇ ಪಂದ್ಯ ಡ್ರಾಗೊಳ್ಳುವ ಮೂಲಕ ಉಭಯ ತಂಡಗಳು ಸರಣಿಯಲ್ಲಿ ಸಮಬಲದಲ್ಲಿವೆ. ನಾಲ್ಕನೇ ಟೆಸ್ಟ್ ಜ.15ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಶತಕ ಬಾರಿಸಿದ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
PublicNext
11/01/2021 02:51 pm