ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವೂ ಮತ್ತೆ ಜನಾಂಗೀಯ ನಿಂದನೆ ಆಪಾದನೆ ಕೇಳಿಬಂದಿದೆ.
ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ನಿಂದನೆ ಮಾಡಿದ್ದ ಆಸೀಸ್ ಪ್ರೇಕ್ಷಕರು ಇಂದು ಮತ್ತೆ ತಮ್ಮ ಕೀಳು ಮನಸ್ಥಿತಿ ತೋರಿದರು. ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್ ಅವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ಸಿರಾಜ್ ಕೂಡಲೇ ಅಂಪೈರ್‌ಗಳ ಗಮನಕ್ಕೆ ತಂದರು. ನಿಂದನೆ ಮಾಡಿದ ಪ್ರೇಕ್ಷಕರ ಬಳಿಗೆ ತೆರಳಿದ ಪೊಲೀಸರು ನಾಲ್ವರು ಯುವಕರನ್ನು ಸ್ಟ್ಯಾಂಡ್‌ನಿಂದ ಹೊರಕ್ಕೆ ಕಳುಹಿಸಿದರು.
PublicNext
10/01/2021 11:17 am