ಸಿಡ್ನಿ : ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ಏರುತ್ತಲೇ ಇದೆ. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಎಡಗೈ ತೋರು ಬೆರಳಿಗೆ ಹೊಡೆತ ಬಿದ್ದಿದೆ. ಪರಿಣಾಮ ಮೂಳೆಯ ಕೊಂಡಿ ಕಳಚಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ.
ಜಡೇಜಾ ಸೀಮಿತ ಓವರ್‌ಗಳ ಪಂದ್ಯದ ವೇಳೆಯೂ ಗಾಯಗೊಂಡು ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಈಗ ಮತ್ತೆ ಚಿಕಿತ್ಸೆಗಾಗಿ ತವರಿಗೆ ಮರಳಲಿದ್ದಾರೆ. ಇತ್ತ ರಿಷಬ್ ಪಂತ್ ಬ್ಯಾಟ್ ಮಾಡುವಾಗ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ತಮ್ಮ ಮೊಳಕೈಗೆ ಬಲವಾದ ಹೊಡೆತ ತಿಂದರು. ಆ ನೋವಿನಲ್ಲೇ ಅವರು ಲಯ ಕಳೆದುಕೊಂಡು ಔಟಾದರು. ಆದರೆ ಭಾರತದ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲು ಬಹುತೇಕ ಲಭ್ಯರಿರುತ್ತಾರೆ. ಸದ್ಯ ಅವರ ಜಾಗದಲ್ಲಿ ವೃದ್ಧಿಮಾನ್ ಸಹಾ ಕೀಪಿಂಗ್ ಮಾಡುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್ 105.10 ಓವರ್‌ಗಳಿಗೆ 338/10
ಭಾರತ: ಪ್ರಥಮ ಇನಿಂಗ್ಸ್ 100.4 ಓವರ್‌ಗಳಿಗೆ 244/10
ಆಸ್ಟ್ರೇಲಿಯಾ: ಎರಡನೇ ಇನ್ನಿಂಗ್ಸ್ 64 ಓವರ್‌ಗಳಿಗೆ (ಊಟದ ವಿರಾಮ) 182/4
PublicNext
10/01/2021 07:22 am