ಸಿಡ್ನಿ: ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡು ಇನ್ನಿಂಗ್ಸ್ ಆರಂಭಿಸಿದೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಎರಡು ಸುಲಭ ಕ್ಯಾಚ್ ಕೈ ಚೆಲ್ಲಿ ಆಸ್ಟ್ರೇಲಿಯಾ ರನ್ ಮಳೆ ಹರಿಸಲು ಕಾರಣರಾದರು. ಇದರಿಂದಾಗಿ ನೆಟ್ಟಿಗರು ಪಂತ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಕೈಗೆ ಬೆಣ್ಣೆ ಹಚ್ಚಿಕೊಂಡು ರಿಷಬ್ ಪಂತ್ ಮೈದಾನಕ್ಕಿಳಿದಿದ್ದಾರೆ. ಅವರಿಗಿಂತ ವೃದ್ಧಿಮಾನ್ ಸಹಾ ಪರವಾಗಿಲ್ಲ. ಅವರು ಏನೇ ಆಗಲಿ ಕ್ಯಾಚ್ ಕೈ ಚೆಲ್ಲುತ್ತಿರಲಿಲ್ಲ. ರವಿಚಂದ್ರನ್ ಅಶ್ವಿನ್ ಬಗ್ಗೆ ಮರುಕವೆನಿಸುತ್ತದೆ. ಅತ್ಯುತ್ತಮ ಎಸೆತ ಎಸೆದೂ ವಿಕೆಟ್ ಪಡೆಯುವ ಭಾಗ್ಯ ಅವರಿಗೆ ಇಲ್ಲ ಎಂದು ನೆಟ್ಟಿಗರು ಪಂತ್ ಅವರನ್ನು ಟ್ರೋಲ್ ಮಾಡಿದ್ದಾರೆ.
ಆಸ್ಟ್ರೇಲಿಯಾ ತಂಡವು 35ನೇ ಓವರ್ ಮುಕ್ತಾಯಕ್ಕೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದೆ. ಸದ್ಯ ಮಾರ್ನಸ್ ಲ್ಯಾಬುಸ್ಚಾಗ್ನೆ ಹಾಗೂ ಸ್ಟೀವನ್ ಸ್ಮಿತ್ ಬ್ಯಾಟಿಂಗ್ ನಡೆಸಿದ್ದಾರೆ. ಭಾರತದ ಪರ ಯುವ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಹಾಗೂ ನವದೀಪ್ ಸೈನಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
PublicNext
07/01/2021 12:23 pm