ಮೆಬ್ಲರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರನೇ ಟೆಸ್ಟ್‌ಗೂ ಮುನ್ನ ವಿವಾದಕ್ಕೆ ಗುರಿಯಾಗಿತ್ತು. ಆದರೆ ಈಗ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ.
ಹೌದು. ಟೀಂ ಇಂಡಿಯಾದ ಎಲ್ಲ ಆಟಗಾರರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಇದರಿಂದಾಗಿ ರೋಹಿತ್ ಶರ್ಮಾ, ರಿಷಬ್ ಪಂತ್, ನವದೀಪ್ ಸೈನಿ, ಶುಭ್ಮನ್ ಗಿಲ್ ಹಾಗೂ ಪೃಥ್ವಿ ಶಾ ಅವರು ಆಸ್ಟ್ರೇಲಿಯಾದ ರೆಸ್ಟೋರೆಂಟ್‌ನಲ್ಲಿ ಜೈವಿಕ ಸುರಕ್ಷತಾ ವಲಯವನ್ನು ಬೇಧಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿತ್ತು. ಈ ಮಧ್ಯೆ ಭಾನುವಾರ ಟೀಂ ಇಂಡಿಯಾದ ಆಟಗಾರರು ಹಾಗೂ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿತ್ತು. ಸದ್ಯ ಎಲ್ಲಾ ಆಟಗಾರರ ವರದಿ ಬಂದಿದ್ದು ಎಲ್ಲಾ ಆಟಗಾರರ ವರದಿಯೂ ನೆಗೆಟಿವ್ ಬಂದಿದೆ.
PublicNext
04/01/2021 12:11 pm