ಸರಣಿ ಸೋಲುಗಳ ಸರದಾರ ಜನ ಮೆಚ್ಚಿದ ತಂಡ ಆರ್ ಸಿ ಬಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ.
ಸತತ ಸೋಲು ಕಂಡರು ಈ ತಂಡವನ್ನು ಪ್ರೀತಿಸುವ ಅಭಿಮಾನಿಗಳಿದ್ದಾರೆ.
ಕಳೆದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆದಿತ್ತು.
ಫೈನಲ್ ಗೇರಲು ವಿಫಲವಾದರು ಹಿಂದಿನ ಸೀಸನ್ ಗಿಂತ ಐಪಿಎಲ್ 2020 ರಲ್ಲಿ ಕೊಹ್ಲಿ ಪಡೆ ಹೋರಾಡಿ ಸೋತಿತು.
ಸದ್ಯ ಐಪಿಎಲ್ 14ನೇ ಆವೃತ್ತಿಗೆ ಎಲ್ಲ ತಂಡಗಳು ಈಗಾಗಲೇ ಸಿದ್ಧತೆಗಳನ್ನು ನಡೆಸುತ್ತಿವೆ. ಬಿಸಿಸಿಐ ಕೂಡ ಭಾರತದಲ್ಲೇ 2021 ಐಪಿಎಲ್ ಅನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ತಯಾರಿಯಲ್ಲಿದೆ.
ಆದರೆ, 2021 ಐಪಿಎಲ್ ನಲ್ಲಿ ಕಪ್ ಗೆಲ್ಲುವ ಪ್ಲ್ಯಾನ್ ಹಾಕಿಕೊಂಡಿರುವ ಆರ್ ಸಿಬಿಗೆ ದೊಡ್ಡ ಆಘಾತವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್ ವೇಗಿಯೊಬ್ಬರನ್ನು ಕಳೆದುಕೊಂಡಿದೆ.
ಹೌದು, ವಿಶ್ವದ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರೆನಿಸಿರುವ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ 14ನೇ ಐಪಿಎಲ್ ಗೆ 3 ತಿಂಗಳು ಬಾಕಿ ಇರುವಾಗಲೇ ದೂರ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ.
ಕೇವಲ 2021ರ ಐಪಿಎಲ್ ನಿಂದ ಮಾತ್ರ ಹೊರ ಹೋಗುತ್ತಿದ್ದೇನೆ. ಆದರೆ ಈ ನಿರ್ಧಾರವನ್ನು ಆರ್ ಸಿಬಿ ಅಥವಾ ಕ್ರಿಕೆಟ್ ತ್ಯಜಿಸುತ್ತಿದ್ದೇನೆ ಎಂದು ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸ್ಟೇನ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
"ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅಲಭ್ಯನಾಗುತ್ತಿದ್ದೇನೆಂದು ಒಂದು ಸಣ್ಣ ಸಂದೇಶದ ಮೂಲಕ ಪ್ರತಿಯೊಬ್ಬರಿಗೂ ತಿಳಿಸುತ್ತಿದ್ದೇನೆ.
ಬೇರೊಂದು ತಂಡಕ್ಕೆ ಆಡುವ ಬಗ್ಗೆಯೂ ನಾನು ಯಾವುದೇ ಪ್ಲ್ಯಾನ್ ಮಾಡುತ್ತಿಲ್ಲ.
ಈ ಅವಧಿಯಲ್ಲಿ ಕ್ರಿಕೆಟ್ ನಿಂದ ವಿರಾಮ ಪಡೆಯಲು ಬಯಸುತ್ತಿದ್ದೇನೆ. ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ ಆರ್ ಸಿಬಿಗೆ ಧನ್ಯವಾದ," ಎಂದು ಸ್ಟೇನ್ ಬರೆದಿದ್ದಾರೆ.
ಆರ್ಸಿಬಿ ಫ್ರಾಂಚೈಸಿ ಸ್ಟೇನ್ ಅವರ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ನೆನಪುಗಳಿಗೆ ಧನ್ಯವಾದಗಳು.
ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇವೆ ಡೇಲ್ ಸ್ಟೇನ್! ಎಂದು ಟ್ವೀಟ್ ಮಾಡಿದೆ.
PublicNext
03/01/2021 10:19 am