ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಹಿತ್ ಶರ್ಮಾ ಸೇರಿ ಟೀಂ ಇಂಡಿಯಾದ ಐವರು ಆಟಗಾರರಿಗೆ ಕಂಟಕ ತಂದ ಅಭಿಮಾನಿ!

ಮೆಲ್ಬರ್ನ್: ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಐವರು ಆಟಗಾರರಿಗೆ ಭಾರತೀಯ ಅಭಿಮಾನಿಯಿಂದ ಕಂಟಕ ಎದುರಾಗಿದೆ.

ಹೌದು. ಚಾಡ್‌ಸ್ಟೋನ್ ಶಾಪಿಂಗ್‌ ಸೆಂಟರ್‌ನ ಸೀಕ್ರೆಟ್ ಕಿಚನ್ ಚೈನೀಸ್ ರೆಸ್ಟೋರೆಂಟ್‌ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕಂಡು ಖುಷಿಯಾದೆ. ಅವರ ಹೊಟೇಲ್ ಬಿಲ್ ಅನ್ನು ತಾನೇ ಪಾವತಿಸಿದ್ದೆ ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅಭಿಮಾನಿಯ ಪೋಸ್ಟ್‌ನಿಂದಾಗಿ ತಂಡದ ಪ್ರಮುಖ ಆಟಗಾರರಿಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಕೈ ತಪ್ಪುವ ಭೀತಿ ಎದುರಾಗಿದೆ.

ಭಾರತ ತಂಡದ ಆಟಗಾರರಾದ ಉಪನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ನವದೀಪ್ ಸೈನಿ, ಶುಭ್‌ಮನ್ ಗಿಲ್, ಪೃಥ್ವಿ ಶಾ ಅವರ ವಿರುದ್ಧ ಬಯೋ ಬಬಲ್ ನಿಯಮ ಮೀರಿ ನಡೆದುಕೊಂಡ ಆರೋಪ ಕೇಳಿ ಬಂದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಐವರಿಗೂ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ವಿಧಿಸಲಾಗುತ್ತದೆ. ಜೊತೆಗೆ ಅವರು ಪ್ರತ್ಯೇಕವಾಗಿ ಪ್ರಯಾಣ, ಅಭ್ಯಾಸ ನಡೆಸಲಿದ್ದಾರೆ.

Edited By : Vijay Kumar
PublicNext

PublicNext

02/01/2021 06:05 pm

Cinque Terre

60.3 K

Cinque Terre

0