ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೀಂ ಇಂಡಿಯಾ ಸೇರಿದ ' ಹಿಟ್ ಮ್ಯಾನ್'

ಮೆಲ್ಬರ್ನ್: ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಎರಡು ವಾರಗಳ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.

ಈ ಕುರಿತು ವಿಡಿಯೋ ಟ್ವೀಟ್ ಮಾಡಿರುವ ಬಿಸಿಸಿಐ, ಮೆಲ್ಬರ್ನ್‌ನಲ್ಲಿ ಯಾರು ತಂಡವನ್ನು ಸೇರಿದ್ದಾರೆಂದು ನೋಡಿ. ರೋಹಿತ್ ಶರ್ಮಾ ಅವರಿಗೆ ಟೀಂ ಇಂಡಿಯಾ ಆಟಗಾರರು ಆತ್ಮೀಯ ಸ್ವಾಗತ ಕೋರಿದರು ಎಂದು ಬರೆದುಕೊಂಡಿದೆ.

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಅಲಭ್ಯವಾಗಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದ ಅವರು ಆಸ್ಟ್ರೇಲಿಯಾದ ಸಿಡ್ನಿಗೆ ಮರಳಿ ಕ್ವಾರಂಟೈನ್ ಆಗಿದ್ದರು. ನಿನ್ನೆ ರಾತ್ರಿ ತಂಡವನ್ನು ಸೇರಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಜನವರಿ 7ರಿಂದ ಪ್ರಾರಂಭವಾಗುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

Edited By : Vijay Kumar
PublicNext

PublicNext

31/12/2020 08:09 am

Cinque Terre

77.56 K

Cinque Terre

4

ಸಂಬಂಧಿತ ಸುದ್ದಿ