ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕ್​ಡೌನ್‌ನಲ್ಲಿ ವಿರಾಟ್ ಅನುಷ್ಕಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ-​ ಗಾವಸ್ಕರ್​ ವಿರುದ್ಧ ಭುಗಿಲೆದ್ದ ಆಕ್ರೋಶ

ದುಬೈ: ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್​ ಗಾವಸ್ಕರ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರ ಬಗ್ಗೆ ಅಸಭ್ಯ ಪದ ಬಳಸಿ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಕೈಚೆಲ್ಲಿದ್ದರು. ಈ ಕುರಿತಂತೆ ವಿಶ್ಲೇಷಣೆ ನೀಡಿದ್ದ ಗವಾಸ್ಕರ್ ಅವರು, 'ಲಾಕ್​ಡೌನ್​ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ' ಎಂದು ಹೇಳಿದ್ದಾರೆ. ಗವಾಸ್ಕರ್ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ. 'ಗವಾಸ್ಕರ್‌ ಅವರನ್ನ ಕಾಮೆಂಟರಿ ಪ್ಯಾನೆಲ್‌ನಿಂದಲೇ ಕಿತ್ತು ಎಸೆಯಿರಿ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ದೊಡ್ಡ ಅಭಿಯಾನವೇ ಶುರುವಾಗಿದೆ.

Edited By : Vijay Kumar
PublicNext

PublicNext

25/09/2020 02:33 pm

Cinque Terre

52.16 K

Cinque Terre

7

ಸಂಬಂಧಿತ ಸುದ್ದಿ