ನವದೆಹಲಿ : ಕೊರೊನಾ ಕಾಲಘಟ್ಟದ ನಡುವೆ ಐಪಿಎಲ್ ಆರಂಭವಾಗಿತ್ತೋ ? ಇಲ್ಲವೂ ಎಂದು ಮಂಕಾಗಿದ್ದ ಕ್ರಿಕೇಟ್ ಪ್ರೇಮಿಗಳಿಗೆ ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗಲಿದೆ.
ಬರೋಬ್ಬರಿ 6 ತಿಂಗಳು ತಡವಾಗಿ ಐಪಿಎಲ್ ಆರಂಭವಾಗುತ್ತಿದ್ದು ಈ ಬಾರಿ ಕ್ರಿಕೇಟ್ ನಿರೂಪಣೆಯ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಗೋತ್ತಾ ?
ಐಪಿಎಲ್‍ನಲ್ಲಿ ನಿರೂಪಣೆ ಮಾಡುವ ಆ್ಯಂಕರ್ಸ್ ಗಳ ಪಟ್ಟಿಯನ್ನು ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಟಾರ್ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಅವರ ಹೆಸರು ಕಂಡು ಬಂದಿಲ್ಲ.
ಸ್ಟಾರ್ ಸ್ಪೋರ್ಟ್ಸ್ ಅಳ್ಳು ಹುರಿದಂತೆ ಮಾತನಾಡುವ ಹೊಸ ನಿರೂಪಕರ ಪಟ್ಟಿಯನ್ನು ನೀಡಿದ್ದು ಈ ಹಿಂದೆ ಐಪಿಎಲ್‍ನಲ್ಲಿ ನಿರೂಪಣೆ ಮಾಡುತ್ತಿದ್ದ ಸ್ಟಾರ್ ನಿರೂಪಕಿ ಮಾಯಂತಿ ಲ್ಯಾಂಗರ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಈ ಬಗ್ಗೆ ನಿರೂಪಕಿಯೂ ಪ್ರತಿಕ್ರಿಯೆ ನೀಡಿಲ್ಲ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂಬರುವ ಐಪಿಎಲ್‍ಗಾಗಿ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕ ನೆರೋಲಿ ಮೆಡೋಸ್ ಅವರನ್ನು ಮಣೆ ಹಾಕಿದೆ ಉಳಿದಂತೆ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್ ಮತ್ತು ಧೀರಜ್ ಜುನೇಜಾ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಾಯಂತಿ ಲ್ಯಾಂಗರ್ ಅವರ ಅನುಪಸ್ಥಿತಿಯಲ್ಲಿ, ಈ ಬಾರಿಯ ಐಪಿಎಲ್‍ನಲ್ಲಿ ಹೊಸ ನಿರೂಪಕರ ತಂಡ ಹೇಗೆ ಕೆಲಸ ನಿರ್ವಹಿಸಲಿದೆ ಜನರನ್ನು ಹೇಗೆ ಹುರಿ ದುಂಬಿಸಲಿದೆ ಕಾದು ನೋಡೋಣ.
PublicNext
18/09/2020 10:57 am