ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶುಭ್‌ಮನ್ ಗಿಲ್ ಬಿಟ್ರೆ ಎಲ್ಲರೂ ಬ್ಯಾಟಿಂಗ್‌ನಲ್ಲಿ ಟುಸ್- ರಾಜಸ್ಥಾನಕ್ಕೆ 175 ರನ್‌ಗಳ ಗುರಿ ನೀಡಿದ ಕೆಕೆಆರ್

ದುಬೈ: ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಹೊರತುಪಡಿಸಿ ಉಳಿದ ಆಟಗಾರರು ಬ್ಯಾಟಿಂಗ್ ವೈಫಲ್ಯ ತೋರಿದ ಪರಿಣಾಮ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ್ ರಾಯಲ್ಸ್‌ಗೆ 175 ರನ್‌ಗಳ ಗುರಿ ನೀಡಿದೆ.

ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 12ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್‌ 6 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿದೆ.

ಕೊಲ್ಕತ್ತಾ ನೈಟ್ ರೈಡರ್ಸ್​ಗೆ ಸುನೀಲ್ ನರೈನ್ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಸುನೀಲ್ ನರೈನ್ ಕೇವಲ 15 ರನ್‌ಗೆ ವಿಕೆಟ್ ಒಪ್ಪಿಸಿದರು. ಪವರ್ ಪ್ಲೇ ಬಳಿಕ ರಾಜಸ್ಥಾನ್ ಬೌಲರ್‌ಗಳ ವಿರುದ್ಧ ತಿರುಗಿಬಿದ್ದ ನಿತೀಶ್ ರಾಣಾ ಹಾಗೂ ಶುಭ್​ಮನ್ ಗಿಲ್ ರನ್​ ಗತಿ ಹೆಚ್ಚಿಸಿದರು. ಪರಿಣಾಮ 4 ಓವರ್​ಗಳಲ್ಲಿ 40 ರನ್ ಚಚ್ಚಿದರು. ಆದರೆ 10ನೇ ಓವರ್​ನಲ್ಲಿ ರಾಣಾ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಶುಭ್​ಮನ್​ ಗಿಲ್ (47 ರನ್) ಜೋಫ್ರಾ ಆರ್ಚರ್​ಗೆ ವಿಕೆಟ್ ಒಪ್ಪಿಸಿ ಮತ್ತೊಂದು ಅರ್ಧಶತಕ ತಪ್ಪಿಸಿಕೊಂಡರು. ಬಳಿಕ ಬಂದ ರಸೆಲ್ (24 ರನ್), ನಾಯಕ ದಿನೇಶ್ ಕಾರ್ತಿಕ್(1 ರನ್), ಕಮಿನ್ಸ್ (12 ರನ್) ಪೆವಿಲಿಯನ್‌ ಕಡೆಗೆ ಪರೇಡ್ ನಡೆಸಿದರು.

Edited By : Vijay Kumar
PublicNext

PublicNext

30/09/2020 09:29 pm

Cinque Terre

61.67 K

Cinque Terre

3

ಸಂಬಂಧಿತ ಸುದ್ದಿ