ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೂಪರ್ ಓವರಿನಲ್ಲಿ ಸೈನಿ, ಎಬಿಡಿ ಕಮಾಲ್- ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಆರ್‌ಸಿಬಿ

ದುಬೈ: ಭಾರೀ ಕುತೂಹಲ ಕೆರಳಿಸಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೂಪರ್‌ ಓವರಿನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

ದುಬೈನಲ್ಲಿ ಇಂದು ನಡೆದ ಐಪಿಎಲ್​ನ 10ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಆರ್‌ಸಿಬಿ ನೀಡಿದ್ದ 202 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಸಮಬಲ ಸಾಧಿಸಿತು. ಹೀಗಾಗಿ ಪಂದ್ಯವು ಸೂಪರ್ ಓವರಿಗೆ ತುತ್ತಾಯಿತು.

ಆರ್‌ಸಿಬಿ ನೀಡಿದ್ದ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲೇ ಆಘಾತಕ್ಕೆ ಒಳಗಾಗಿತ್ತು. ಕೇವಲ 8 ರನ್‌ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಶೂನ್ಯ ರನ್‌ಗೆ ಹಾಗೂ ಕ್ವಿಂಟನ್ ಡಿ ಕಾಕ್ (14 ರನ್‌) ವಿಕೆಟ್‌ ಕಳೆದುಕೊಂಡರು. ಹಾರ್ದಿಕ್ ಪಾಂಡ್ಯೆ ಕೂಡ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

ಇಶಾನ್ ಕಿಶನ್ ಜೊತೆಗೂಡಿದ ಕೈರನ್ ಪೊಲಾರ್ಡ್ ಆಟದ ವೇಗವನ್ನು ಹೆಚ್ಚಿಸಿದರು. ಪೊಲಾರ್ಡ್ 18ನೇ ಓವರಿನಲ್ಲಿ ಮೂರು ಸಿಕ್ಸರ್ ಸಿಡಿಸಿದರು. ಕೊನೆಯ ಓವರಿನ 3 ಹಾಗೂ 4ನೇ ಎಸೆತದಲ್ಲಿ ಕಿಶನ್ ನಿರಂತರ ಸಿಕ್ಸರ್ ಸಿಡಿಸಿದರು. ಆದರೆ ನಂತರದ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಕೇವಲ ಒಂದು ರನ್ ಅಂತರದಿಂದ ಶತಕವನ್ನು ಕೈಚೆಲ್ಲಿಕೊಂಡರು. ನಂತರದ ಎಸೆತವನ್ನು ಪೊಲಾರ್ಡ್ ಬೌಂಡರಿಗೆ ಅಟ್ಟಿದ್ದರಿಂದ ಪಂದ್ಯವು ಸಮಬಲ ಸಾಧಿಸಿತು.

ಸೂಪರ್‌ ಓವರ್‌:

ಆರ್‌ಸಿಬಿ ಪರ ನವದೀಪ್ ಸೈನಿ ಬೌಲಿಂಗ್‌ ಮಾಡಿದರೆ, ಮುಂಬೈನ ಪರ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡೆ ಬ್ಯಾಟಿಂಗ್ ಆರಂಭಿಸಿದರು. ಮುಂಬೈ ಕ್ರಮವಾಗಿ 1, 1, 0, 4, ವಿಕೆಟ್, 1 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಎಬಿಡಿ ಬ್ಯಾಟಿಂಗ್ ಆರಂಭಿಸಿದರೆ, ಮುಂಬೈ ಪರ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರು. ಆರ್‌ಸಿಬಿ ಕ್ರಮವಾಗಿ 1, 1, 0, 4, 1, 4 ರನ್ ಗಳಿಸಿದರು.

Edited By : Vijay Kumar
PublicNext

PublicNext

28/09/2020 11:54 pm

Cinque Terre

94.85 K

Cinque Terre

4

ಸಂಬಂಧಿತ ಸುದ್ದಿ