ಕೊಡಗು: ಅಂತಾರಾಷ್ಟ್ರೀಯ ಹಾಕಿ ಆಟಗಾರ ಕೊಡಗಿನ ಒಲಂಪಿಯನ್ ಎಸ್.ಕೆ.ಉತ್ತಪ್ಪ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುಟ್ಟಿಚಂಡ ಸಂಜನಾಳೊಂದಿಗೆ ಎಸ್.ಕೆ.ಉತ್ತಪ್ಪ ಅವರು ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಯೆಲ್ಲೋ ಬ್ಯಾಂಬೂ ರೆಸಾರ್ಟ್‌ನಲ್ಲಿ ಭಾನುವಾರ ರಾತ್ರಿ ಕೊಡವ ಸಂಪ್ರದಾಯದಂತೆ ಸರಳವಾಗಿ ಈ ಜೋಡಿ ಇಂದು ಹಸೆಮಣೆಯೇರಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಕೊಡಗಿನ ವಿರಾಜಪೇಟೆ ಬಾಲಾಜಿ ಗ್ರಾಮದ ರೆಸಾರ್ಟ್‌ನಲ್ಲಿ ವಿವಾಹವಾಗಿದ್ದು, ಇಂದು ರಾತ್ರಿ ದಂಪತಿ ಮುಹೂರ್ತ ನಿಗದಿಯಾಗಿದ್ದು, ಕುಟುಂಬದವರು ಮತ್ತು ಬಂಧುಗಳಿಗೆ ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ. ಉತ್ತಪ್ಪ ಅವರು 2012ರ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಎಸ್.ಕೆ ಉತ್ತಪ್ಪ ಏಕಲವ್ಯ ಪ್ರಶಸ್ತಿ ವಿಜೇತರಾಗಿದ್ದಾರೆ. ಹಾಗೂ 164 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
PublicNext
28/09/2020 07:57 am