ಅಬುಧಾಬಿ: ರಾಹುಲ್ ತ್ರಿಪಾಠಿ ಭರ್ಜರಿ ಅರ್ಧಶತಕದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ಗೆ 168 ರನ್‌ಗಳ ಗುರಿ ನೀಡಿದೆ.
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 21ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ನಲ್ಲಿ ಸರ್ವಪತನದ ಮೂಲಕ 167 ರನ್ ಪೇರಿಸಿತು. ಕೆಕೆಆರ್ ಪರ ರಾಹುಲ್ ತ್ರಿಪಾಠಿ 81 ರನ್ (51 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊರತು ಪಡಿಸಿ ಉಳಿದ ಎಲ್ಲ ಆಟಗಾರರು 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾದರು.
ಸಿಎಸ್‌ಕೆ ಪರ ಬ್ರಾವೋ 3 ವಿಕೆಟ್ ಪಡೆದು ಮಿಂಚಿದರೆ, ಶಾದ್ರೂಲ್ ಠಾಕೂರ್, ಸ್ಯಾಮ್ ಕರ್ರನ್ ಹಾಗೂ ಕರಣ್ ಶರ್ಮಾ ತಲಾ ಎರಡು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.
PublicNext
07/10/2020 09:43 pm