ಇಂದು ದುಬೈನಲ್ಲಿ ಐಪಿಎಲ್ ನ 19ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 4 ಪಂದ್ಯಗಳಲ್ಲಿ 3 ಪಂದ್ಯ ಗೆದ್ದಿದ್ದು, 6 ಅಂಕಗಳನ್ನು ಪಡೆದು (0.588) ನೆಟ್ ರನ್ ರೇಟ್ ಮೂಲಕ ಪಾಯಿಂಟ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿದೆ.
ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿ ಬಿ ತಂಡ ಕೂಡ 4 ಪಂದ್ಯಗಳ ಪೈಕಿ 3 ಪಂದ್ಯದಲ್ಲಿ ಜಯ ಕಂಡು 6 ಅಂಕಗಳನ್ನು ಪಡೆದಿದ್ದು (0.954) ನೆಟ್ ರನ್ ರೇಟ್ ನಿಂದ 3 ನೇ ಸ್ಥಾನದಲ್ಲಿದೆ.
ಇಂದು ಉಭಯ ತಂಡಗಳ ನಡುವೆ ರೋಚಕ ಪಂದ್ಯ ನಡೆಯಲಿದ್ದು ಅಭಿಮಾನಿಗಳು ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.
PublicNext
05/10/2020 04:27 pm