ದುಬೈ : ಗೆಲುವಿನ ಕನಸು ಹೊತ್ತ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಇಂದು ಆಖಾಡಕ್ಕೆ ಇಳಿಯಲಿದೆ.
ಡೇವಿಡ್ ವಾರ್ನರ್ ಸಾರಥ್ಯದ ಬಲಿಷ್ಠ ಸನ್ ರೈಸರ್ ಹೈದರಾಬಾದ್ ಸವಾಲನ್ನು ಎದುರಿಸಲಿದೆ.
ಎರಡೂ ತಂಡಗಳು ಅಪಾಯಕಾರಿ ಹಾಗೂ ಘಟಾನುಘಟಿ ಬ್ಯಾಟ್ಸ್ ಮನ್ ಗಳನ್ನು ಹೊಂದಿವೆ.
ಏಕಾಂಗಿಯಾಗಿ ಪಂದ್ಯವನ್ನು ತಮ್ಮತ್ತ ಸೆಳೆಯುವ ಆಟಗಾರರು ಎರಡೂ ತಂಡಗಳಲ್ಲಿದ್ದಾರೆ ಹೀಗಾಗಿ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.
ಎರಡೂ ತಂಡಗಳ ಆಸ್ಟ್ರೇಲಿಯದ ನಂಟು ಬಲವಾದುದು. ಆರಂಭಿಕರ ವಿಷಯಕ್ಕೆ ಬಂದಾಗ ಆಸ್ಟ್ರೇಲಿಯದ ಸಾಂಪ್ರದಾಯಿಕ ಜೋಡಿಯೊಂದು ಇಲ್ಲಿ ಪರಸ್ಪರ ಎದುರಾಗುವುದೊಂದು ವಿಶೇಷ.
ವಾರ್ನರ್ ಹೈದರಾಬಾದ್ ತಂಡದಲ್ಲಿದ್ದರೆ, ಅವರ ಜತೆಗಾರ ಆರನ್ ಫಿಂಚ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ.
PublicNext
21/09/2020 08:30 am