ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಸ್ಟ್ 3 ಸಿಕ್ಸರ್‌ನಲ್ಲಿ ಇನ್ನಿಂಗ್ಸ್ ಮುಗಿಸಿದ ಪಂಜಾಬ್- ಮುಂಬೈಗೆ 48 ರನ್‌ಗಳಿಂದ ಭರ್ಜರಿ ಗೆಲುವು

ಅಬುಧಾಬಿ: ನಿಕೋಲಸ್ ಪೂರನ್ ಹೊರತು ಪಡಿಸಿ ನಾಯಕ ಕೆ.ಎಲ್.ರಾಹುಲ್ ಸೇರಿದಂತೆ ಎಲ್ಲ ಆಟಗಾರರ ಬ್ಯಾಟಿಂಗ್ ವೈಫಲ್ಯದ ಪರಿಣಾಮ ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 48 ರನ್‌ಗಳಿಂದ ಹೀನಾಯ ಸೋಲು ಕಂಡಿದೆ.

ಅಬಿಧಾಬಿ ಶೇಖ್ ಝಯಾದ್ ಮೈದಾನದಲ್ಲಿ ನಡೆದ ಐಪಿಎಲ್​ನ 13ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಮುಂಬೈ ತಂಡ ನೀಡಿದ 192 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಲು ಮಾತ್ರ ಶಕ್ತವಾಯಿತು. ಪಂಜಾಬ್ ಪರ ನಿಕೋಲಸ್ ಪೂರನ್ 44 ರನ್ (27 ಎಸೆತ, 3 ಬೌಂಡರಿ, 2 ಸಿಕ್ಸರ್), ಮಯಾಂಕ್ ಅಗರ್ವಾಲ್ 25 ರನ್ (18 ಎಸೆತ, 3 ಬೌಂಡರಿ), ಕೆ.ಗೌತಮ್ 22 ರನ್ (13 ಎಸೆತ, 2 ಬೌಂಡರಿ, 1 ಸಿಕ್ಸ್‌) ಚಚ್ಚಿದರು.

ಬೃಹತ್ ಗುರಿ ಬೆನ್ನತಿದ ಕಿಂಗ್ಸ್​ ಇಲೆವೆನ್​ಗೆ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಮುಂಬೈ ಬೌಲರ್‌ಗಳನ್ನು ದಂಡಿಸಲು ಪ್ರಾರಂಭಿಸಿದ ಕಿಂಗ್ಸ್​ ಓಪನರ್​ಗಳು ಮೊದಲ 3 ಓವರ್​ನಲ್ಲೇ ತಂಡದ ಮೊತ್ತವನ್ನು 30ರ ಗಡಿದಾಟಿಸಿದರು. ಆದರೆ ಐದನೇ ಓವರ್​ನಲ್ಲಿ ಬೌಲಿಂಗ್ ಆರಂಭಿಸಿದ ಬುಮ್ರಾ ಎಸೆತವನ್ನು ಗುರುತಿಸುವಲ್ಲಿ ಎಡವಿದ ಅಗರ್ವಾಲ್ (25 ರನ್) ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ಗೋಲ್ಡನ್ ಡಕ್​ನೊಂದಿಗೆ ಕರುಣ್ ನಾಯರ್ ಕೂಡ ಬಂದ ವೇಗದಲ್ಲೇ ಪೆವಿಲಿಯನ್ ಕಡೆ ಮುಖ ಮಾಡಿದರು.

ರಾಹುಲ್ ಚಹರ್ ಎಸೆದ 9ನೇ ಓವರ್​ನಲ್ಲಿ ಸ್ಕೂಪ್ ಮಾಡಲೋದ ಕೆಎಲ್ ರಾಹುಲ್ (17 ರನ್ಸಸ) ಕ್ಲೀನ್ ಬೌಲ್ಡ್ ಆದರು. ಇದರ ಬಳಿಕ ಜೊತೆಯಾದ ಪೂರನ್ ಹಾಗೂ ಮ್ಯಾಕ್ಸ್​ವೆಲ್ ಉತ್ತಮ ಜೊತೆಯಾಟ ಆರಂಭಿಸಿದರು. ಆದರೆ 27 ಎಸೆತಗಳಲ್ಲಿ 44 ರನ್ ಬಾರಿಸಿದ ಪೂರನ್ ಪ್ಯಾಟಿನ್ಸನ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ (11 ರನ್) ತಮ್ಮ ಇನಿಂಗ್ಸ್​ ಅಂತ್ಯಗೊಳಿಸಿದರು. ಇನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಜಿಮ್ಮಿ ನೀಶಮ್ (7) ಕೂಡ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಕೆ.ಗೌತಮ್ ಔಟಾಗದೆ 22 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ ಬಳಿಕ ಬಂದ ಯಾವುದೇ ಆಟಗಾರರು ಎರಡಂಕಿ ರನ್‌ ದಾಟಲಿಲ್ಲ. ಪಂಜಾಬ್ ಇನ್ನಿಂಗ್ಸ್‌ ನಲ್ಲಿ ಕೇವಲ ಮೂರು ಸಿಕ್ಸರ್ ಗಳು ದಾಖಲಾದವು.

Edited By : Vijay Kumar
PublicNext

PublicNext

01/10/2020 11:43 pm

Cinque Terre

56.56 K

Cinque Terre

4

ಸಂಬಂಧಿತ ಸುದ್ದಿ