ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡದ ಕನ್ನಡಿಗ ದೇವದತ್ ಪಡಿಕ್ಕಲ್ ಮ್ಯಾಜಿಕಲ್ ಕ್ಯಾಚ್ ಹಿಡಿದು ಅಭಿಮಾನಿಗಳ ಮನ ಗೆದ್ದಿದ್ದಾರೆ.
ಮೊಯಿನ್ ಅಲಿ ಎಸೆದ 12ನೇ ಓವರಿನ ಮೂರನೇ ಎಸೆತವನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಸಿಕ್ಸ್ ಹೊಡೆಯುವ ಪ್ರಯತ್ನದಲ್ಲಿ ಡೀಪ್ ಮಿಡ್ ವಿಕೆಟ್ ಕಡೆಗೆ ಬಲವಾಗಿ ಹೊಡೆದಿದ್ದರು. ಆದರೆ ಬೌಂಡರಿ ಗೆರೆಯ ಬಳಿ ಇದ್ದ ಪಡಿಕ್ಕಲ್ ಹಿಂದಕ್ಕೆ ಬಾಗಿ ಕ್ಯಾಚ್ ಹಿಡಿದು ಮೇಲಕ್ಕೆ ಎಸೆದರು. ಈ ವೇಳೆ ಪಡಿಕ್ಕಲ್ ಅವರು ಬೌಂಡರಿ ಗೆರೆಯ ಒಳಗಡೆ ನಿಲ್ಲಲು ಸಾಧ್ಯವಾಗಲಿಲ್ಲ. ಬೌಂಡರಿ ಗೆರೆ ದಾಟಿದ ಬಳಿಕ ಮತ್ತೆ ಒಳಗಡೆಗೆ ಬಂದು ಕ್ಯಾಚ್ ಹಿಡಿದರು. ಒಂದು ವೇಳೆ ಪಡಿಕ್ಕಲ್ ತಡೆ ಹಿಡಿಯದಿದ್ದರೆ ಸಿಕ್ಸ್ ಆಗುವ ಸಾಧ್ಯತೆಯಿತ್ತು. ಇದರಿಂದಾಗಿ ಶ್ರೇಯಸ್ ಅಯ್ಯರ್ 13 ಎಸೆತದಲ್ಲಿ 11 ರನ್ ಹೊಡೆದು ಔಟಾದರು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿಗೆ 197 ರನ್‌ಗಳ ಗುರಿ ನೀಡಿದೆ.
PublicNext
05/10/2020 10:20 pm