ಕೂತವರನ್ನ ಕೂತಂತೆ ನಿಂತವರನ್ನ ನಿಂತಲ್ಲಿಯೇ ಮಂತ್ರ ಮುಗ್ದರನ್ನಾಗಿಸಿದ ಜನಪ್ರಿಯ ಪಬ್ಜಿ ಗೇಮ್ ಕೂಡ ಬ್ಯಾನ್ ಆಗಿದೆ ಪಬ್ಜಿ ಪ್ರೀತಿಯೊಂದಿಗೆ ಶಾಕ್ ಎದುರಾಗಿತ್ತು. ಹೀಗಿದ್ದರೂ ಕೂಡಾ ಕೆಲವು ಬಳಕೆದಾರರಿಗೆ ಪಬ್ಜಿ ಮೊಬೈಲ್ ಮತ್ತು ಪಬ್ಜಿ ಲೈಟ್ ಆವೃತ್ತಿ ಭಾರತ ದೇಶದಲ್ಲಿ ಸಿಕ್ಕಿತ್ತು ಆದ್ರೇ ಇಂದಿನಿಂದ ದೇಶದಲ್ಲಿ ಆ ಪಕ್ರಿಯೆ ಸಂಪೂರ್ಣ ನಿಷೇಧಕ್ಕೆ ಒಳಪಟ್ಟಿದೆ.
ಹೌದು ! ನಿಷೇಧದ ಬಳಿಕವೂ ಹಲವರು ಮೊದಲೇ ಪಬ್ಜಿ ಇನ್ಸ್ಟಾಲ್ ಮಾಡಿಕೊಂಡಿದ್ದರೆ, ಪಬ್ಜಿ ಲೈಟ್ ಮತ್ತು ಪಬ್ಜಿ ಮೊಬೈಲ್ ದೇಶದಲ್ಲಿ ಬಳಕೆಗೆ ಲಭ್ಯವಿತ್ತು ಸೆ. 2ರಂದು ನಿಷೇಧ ಹೇರಿದರೂ ಕಾರ್ಯ ನಿರ್ವಹಿಸುತ್ತಿದ್ದ ಪಬ್ಜಿಗೆ ಇಂದಿನಿಂದ ಸಂಪೂರ್ಣ ನಿರ್ಬಂಧ ವಿಧಿಸಿದ್ದು ಗೂಗಲ್ ಆ್ಯಪ್ ಸ್ಟೋರ್ನಲ್ಲೂ ಇನ್ಮುಂದೆ ಪಬ್ಜಿ ಸಿಗೋಲ್ಲ. ನೀವು ಈಗಾಗಲೇ ಡೌನ್ಲೋಡ್ ಮಾಡಿದ್ದರೂ ಪಬ್ಜಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ಈ ಬಗ್ಗೆ ಫೇಸ್ಬುಕ್ನಲ್ಲಿ ಪಬ್ಜಿ ಪೋಸ್ಟ್ ದೇಶದಲ್ಲಿ ಕಾರ್ಯಾಚರಣೆ ನಿಲ್ಲಿಸುತ್ತಿರುವ ಕುರಿತು ಪಬ್ಜಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಸರಕಾರದ ನಿಯಮದ ಅನುಸಾರ ಪಬ್ಜಿ ಇಂದಿನಿಂದ ದೇಶದಲ್ಲಿ ಅಲಭ್ಯ ಎಂದಿದೆ.
PublicNext
30/10/2020 01:28 pm