ಅಬುಧಾಬಿ: ಬಹು ನಿರೀಕ್ಷಿತ ಐಪಿಎಸ್ 13ನೇ ಆವೃತ್ತಿಯ ಮೊದಲ ಪಂದ್ಯದಲ್ಲಿಯೇ ಸೋಲು ಕಂಡರೂ ಮುಂಬೈ ಇಂಡಿಯನ್ಸ್ ತಂಡವು ದಾಖಲೆಯನ್ನು ಬರೆದಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ನಾಯಕತ್ವದ ಪಡೆ ನಿಗದಿತ 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಫಾಫ್ ಡು ಪ್ಲೆಸಿಸ್ 58 ರನ್ ಹಾಗೂ ಅಂಬಾಟಿ ರಾಯುಡು 71 ರನ್ ಕೊಡುಗೆಯೊಂದಿಗೆ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಗೆಲುವಿನ ಖಾತೆ ತೆರೆಯಿತು. ಇತ್ತ ಸೋಲು ಅನುಭವಿಸಿದ ಮುಂಬೈ ತಂಡ ಕೆಟ್ಟ ದಾಖಲೆಗೆ ಗುರಿಯಾಗಿದೆ.
ಮುಂಬೈ ಇಂಡಿಯನ್ಸ್ ತಂಡವು 2013ರಿಂದ ಇಲ್ಲಿವರೆಗೆ ಸತತ 8 ಆವೃತ್ತಿಯ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ. ಈ ಮೂಲಕ ಅತಿ ಹೆಚ್ಚು ಮೊದಲ ಪಂದ್ಯ ಸೋತಿರುವ ತಂಡ ಎಂಬ ಕೆಟ್ಟ ದಾಖಲೆ ಬರೆದಿದೆ. ಆದರೆ ಈ ಅವಧಿಯಲ್ಲೇ ರೋಹಿತ್ ಶರ್ಮಾ ಬಳಗವು ಪಡೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡಿರುವುದು ವಿಶೇಷ.
2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2 ರನ್ ಗಳಿಂದ ಸೋಲು. 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 41ರನ್ ಗಳಿಂದ ಸೋಲು. 2015ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ ನಿಂದ ಸೋಲು. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ವಿಕೆಟ್ ನಿಂದ ಸೋಲು. 2019ರಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ 37ರನ್ ಗಳಿಂದ ಸೋಲು. 2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ಗಳಿಂದ ಸೋಲು.
PublicNext
20/09/2020 10:16 am