ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೂರನ್ ಫೀಲ್ಡಿಂಗ್ ಕಂಡು ಇದು ನನ್ನ ಜೀವಮಾನದಲ್ಲೇ ಅತ್ಯುತ್ತಮ ಸೇವ್ ಎಂದ ಲೆಜೆಂಡ್ ಸಚಿನ್ ತೆಂಡೂಲ್ಕರ್

ಶಾರ್ಜಾ: ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಆಟಗಾರ ನಿಕೋಲಸ್‌ ಪೂರನ್‌ ಅದ್ಭುತ ಫೀಲ್ಡಿಂಗ್‌ ಮಾಡಿ ಕ್ರಿಕೆಟಿಗರ ಮನ ಗೆದ್ದಿದ್ದಾರೆ.

ಸಿಕ್ಸರ್ ಹೋಗುತ್ತಿದ್ದ ಚೆಂಡನ್ನು ಹಾರಿ ಬಾಲನ್ನು ತಡೆದು ಕ್ಷಣ ಮಾತ್ರದಲ್ಲಿ ಹಿಂದಕ್ಕೆ ಎಸೆದು ನಿಕೋಲಸ್ ಪೂರನ್ ಅದ್ಭುತ ಸಾಹಸವನ್ನೇ ಮಾಡಿದ್ದರು.

ಬಾಲ್‌ ಕೈಗೆ ಸಿಕ್ಕಿದ ಕೂಡಲೇ ಅದನ್ನು ಹಿಂದಕ್ಕೆ ಹಾಕಿದ ಪೂರನ್‌ ಫೀಲ್ಡಿಂಗ್‌ ಪ್ರಯತ್ನ ಯಶಸ್ವಿಯಾಗಿರುವುದನ್ನು ಟಿವಿ ರಿಪ್ಲೇಯಲ್ಲಿ ಕಂಡು ಅಭಿಮಾನಿಗಳು ಅವರನ್ನು ಸೂಪರ್‌ ಮ್ಯಾನ್‌ಗೆ ಹೋಲಿಸಿ ಅಭಿನಂದಿಸಿದ್ದಾರೆ.

ಪೂರನ್ ಫೀಲ್ಡಿಂಗ್ ನೋಡಿ ಸಂತಸಗೊಂಡ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಟ್ವೀಟ್‌ ಮಾಡಿದ್ದು 'ಇದು ನನ್ನ ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಸೇವ್' ಎಂದಿದ್ದಾರೆ. ಇದನ್ನು ರಿಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಶೇ...ಎಂಚಿನ ಫೀಲ್ಡಿಂಗ್ ಮಾರ್ರೆ.. (ಎಂತಹ ಫೀಲ್ಡಿಂಗ್) ಎಂದು ಬರೆದುಕೊಂಡಿದೆ.

2015ರಲ್ಲಿ ಪೂರನ್‌ ಅವರಿಗೆ ಅಪಘಾತವಾಗಿ ಕಾಲಿಗೆ ಬಲವಾದ ಏಟು ಬಿದ್ದಿತ್ತು. ಹಲವು ಮಂದಿ ಮುಂದೆ ಪೂರನ್‌ ಕ್ರಿಕೆಟ್‌ ಆಡುವುದು ಅಸಾಧ್ಯವಾಗಬಹುದು ಎಂದು ಹೇಳಿದ್ದರು. ಆದರೆ ಪೂರನ್‌ ಎಲ್ಲ ಲೆಕ್ಕಚಾರವನ್ನು ಉಲ್ಟಾ ಮಾಡಿ ನಾನೊಬ್ಬ ಉತ್ತಮ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Edited By :
PublicNext

PublicNext

28/09/2020 01:21 pm

Cinque Terre

73.32 K

Cinque Terre

2