ಕಡ್ಡಾಯ ಕೂಲಿಂಗ್ ಆಫ್ ನಿಯಮ ರದ್ದು ಕೋರಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ.ಹೌದು ಬಿಸಿಸಿಐ ತನ್ನ ಸಂವಿಧಾನ ತಿದ್ದುಪಡಿಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಬಿಸಿಸಿಐಗೆ ತನ್ನ ಸಂವಿಧಾನ ತಿದ್ದುಪಡಿಗೊಳಿಸಿ ಕಡ್ಡಾಯ ಕೂಲಿಂಗ್ ಆಫ್ ಅವಧಿ ನಿಯಮ ರದ್ದಿಗೆ ಅವಕಾಶ ಇದೆ ಎಂದು ನ್ಯಾ. ಡಿ.ವೈ ಚಂದ್ರಚೂಡ್ ಮತ್ತು ನ್ಯಾ. ಹಿಮಾ ಕೊಹ್ಲಿ ನೇತೃತ್ವದ ನ್ಯಾಯಪೀಠ ಹೇಳಿದೆ.
ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ, ಕಾರ್ಯದರ್ಶಿಯಾಗಿ ಜಯ್ ಶಾ ಮತ್ತೊಂದು ಅವಧಿಗೆ ಮುಂದುವರಿಯಬೇಕು. ಹೀಗಾಗಿ ಕೂಲಿಂಗ್ ಆಫ್ ನಿಯಮ ರದ್ದುಗೊಳಿಸಲು ಅನುಮತಿ ನೀಡಿ ಎಂದು ಬಿಸಿಸಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನ್ಯಾ. ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳ ಪೈಕಿ ಕೂಲಿಂಗ್ ಆಫ್ ನಿಯಮ ಕೂಡ ಒಂದಾಗಿದೆ.
ಬಿಸಿಸಿಐ ಸಂವಿಧಾನದ ಪ್ರಕಾರ ಯಾರೇ ಆಗಲೀ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಬಿಸಿಸಿಐ ಅಧಿಕಾರವನ್ನು ಸತತ 2 ಟರ್ಮ್ ಅನುಭವಿಸಬಾರದು. ಸತತ 2 ಅವಧಿಗಳ ನಡುವೆ ಕಡ್ಡಾಯ 3 ವರ್ಷ ಬಿಡುವು ಪಡಯಲೇಬೇಕು.
PublicNext
14/09/2022 06:10 pm