ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಹ್ಲಿ, ಗಂಗೂಲಿಗೆ ಹೈಕೋರ್ಟ್ ನೋಟಿಸ್

ಚೆನ್ನೈ : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.

ಫ್ಯಾಂಟಸಿ ಗೇಮ್ಸ್ ಆ್ಯಪ್ ಗಳ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.

ಸ್ಥಳೀಯ ಯುವಕನೊಬ್ಬ ಫ್ಯಾಂಟಸಿ ಗೇಮ್ಸ್ ಆಡಿ ಸಾಲ ಮಾಡಿಕೊಂಡು, ಸಾಲ ತೀರಿ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಹೀಗಾಗಿ ಮೊಹಮ್ಮದ್ ರಿಜ್ವಿ ಎನ್ನುವ ಅಡ್ವೋಕೇಟ್ ಕೇಸ್ ದಾಖಲಿಸಿದ್ದರು.

ಸದ್ಯ ಮದ್ರಾಸ್ ಹೈಕೋರ್ಟ್ನ ಮದುರೈ ಬ್ರಾಂಚ್ ನ ನ್ಯಾಯಮೂರ್ತಿ ಬಿ ಪುಂಗಲೇನಿದಿ, ಮತ್ತು ಎನ್. ಕಿರುಬಾಕರನ್ ಅವರನ್ನೊಳಗೊಂಡ ಪೀಠ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಲ್ಲದೇ ನಟ ಪ್ರಕಾಶ್ರಾಜ್, ನಟಿ ತಮನ್ನಾ, ರಾಣಾ ಮತ್ತು ಸುದೀಪ್ ಖಾನ್ ಗೆ ನೋಟಿಸ್ ನೀಡಲಾಗಿದೆ.

ಈ ನೋಟಿಸ್ ಗೆ ನ.19 ರೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.

ಈ ಆ್ಯಪ್ ಗಳು ಐಪಿಎಲ್ ತಂಡಗಳಾದ ಚೆನ್ನೈ ಸೂಪರ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ನ ಹೆಸರಿನಲ್ಲಿವೆ.

Edited By : Nirmala Aralikatti
PublicNext

PublicNext

04/11/2020 10:47 am

Cinque Terre

57.98 K

Cinque Terre

6

ಸಂಬಂಧಿತ ಸುದ್ದಿ