ಶಾರ್ಜಾ: ಮುಂಬೈ ಇಂಡಿಯನ್ಸ್ ಆಲ್‍ರೌಂಡರ್ ಕೃನಾಲ್ ಪಾಂಡ್ಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಆಲ್‌ಟೈಮ್ ದಾಖಲೆ ಬರೆದಿದ್ದಾರೆ.
ಕೃನಾಲ್ ಪಾಂಡ್ಯ ಮುಂಬೈ ಇನ್ನಿಂಗ್ಸ್ ನ ಅಂತ್ಯದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ಈ ದಾಖಲೆ ಬರೆದಿದ್ದಾರೆ. ಅವರು ಕೇವಲ 4 ಎಸೆತಗಳನ್ನು ಎದುರಿಸಿ 500ರ ಸ್ಟ್ರೈಕ್ ರೇಟ್‌ನೊಂದಿಗೆ 20 ರನ್ ಸಿಡಿಸಿದ್ದಾರೆ. ಐಪಿಎಲ್‍ನಲ್ಲಿ ಕನಿಷ್ಠ 10 ರನ್ ಗಳಿಸಿದ ಆಟಗಾರರಲ್ಲಿ 500 ಸ್ಟ್ರೈಕ್ ರೇಟ್ ಹೊಂದಿರುವ ಮೊದಲ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ.
ಸಿದ್ಧಾರ್ಥ್ ಕೌಲ್ ಓವರಿನ ಮೂರನೇ ಎಸೆತವನ್ನು ಸಿಕ್ಸರ್ ಸಿಡಿಸಿದ ಕೃನಾಲ್, ಮುಂದಿನ 2 ಎಸೆತಗಳಲ್ಲಿ 2 ಬೌಂಡರಿ ಸಿಡಿದ್ದರು. ಅಂತಿಮ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ 4 ಎಸೆತಗಳಲ್ಲಿ 20 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಕೃನಾಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ದಾಖಲಿಸಿತ್ತು.
PublicNext
05/10/2020 05:49 pm