ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಸ್ಟ್ 4 ಎಸೆತಗಳಲ್ಲಿ 20 ರನ್‌ ಚಚ್ಚಿದ ಕೃನಾಲ್- ಡಿಕಾಕ್ ಅರ್ಧಶತಕದಿಂದ ಹೈದರಾಬಾದ್‌ ತಂಡಕ್ಕೆ 209 ರನ್‌ಗಳ ಗುರಿ

ಶಾರ್ಜಾ: ಕ್ವಿಂಟನ್ ಡಿಕಾಕ್ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಸಮಯೋಜಿತ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡವು ಸನ್​ರೈಸರ್ಸ್​ ಹೈದರಾಬಾದ್‌ಗೆ 209 ರನ್‌ಗಳ ಗುರಿ ನೀಡಿದೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್-13ರ ಭಾಗವಾಗಿ ನಡೆಯುತ್ತಿರುವ 17ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಕ್ವಿಂಟನ್ ಡಿಕಾಕ್ 67 ರನ್ (39 ಎಸೆತ, 4 ಬೌಂಡರಿ, 4 ಸಿಕ್ಸರ್), ಇಶಾನ್ ಕಿಶನ್ 31 ರನ್ (23 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ 28 ರನ್ ( 19 ಎಸೆತ, 2 ಬೌಂಡರಿ, 2 ಸಿಕ್ಸರ್) ಸಹಾಯದಿಂದ 5 ವಿಕೆಟ್‌ ನಷ್ಟಕ್ಕೆ 208 ರನ್‌ ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಆರಂಭದಲ್ಲೇ ಆಘಾತ ಅನುಭವಿಸಿತು. ಮೊದಲ ಓವರಿ​ನಲ್ಲೇ ನಾಯಕ ರೋಹಿತ್ ಶರ್ಮಾ ಒಂದು ಸಿಕ್ಸರ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ನಂತರ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯ ಕುಮಾರ್ ಯಾದವ್ ಜೊತೆಯಾಗಿ 2ನೇ ವಿಕೆಟ್‌ಗೆ 42 ರನ್‌ಗಳ ಕೊಡುಗೆ ನೀಡಿತು. ಸೂರ್ಯ ಕುಮಾರ್ (27 ರನ್‌) ವಿಕೆಟ್‌ ಬಳಿಕ ಡಿಕಾಕ್‌ಗೆ ಸಾಥ್ ನೀಡಿದ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ಜೋಡಿಯು 3ನೇ ವಿಕೆಟ್‌ ನಷ್ಟಕ್ಕೆ 78 ರನ್‌ಗಳ ಕೊಡುಗೆ ನೀಡಿತು. ಪರಿಣಾಮ 136ಕ್ಕೆ ಏರಿತು. ಆದರೆ 14ನೇ ಓವರಿನಲ್ಲಿ ರಶೀದ್ ಖಾನ್ ಎಸೆದ ಚೆಂಡನ್ನು ಬೌಂಡರಿಗೆ ಅಟ್ಟಲು ಮುಂದಾಗಿದ್ದ ಡಿಕಾಕ್ ಕ್ಯಾಚ್‌ ಒಪ್ಪಿಸಿ ಪೆವಿಲಿಯನ್‌ಗೆ ನಡೆದರು. ಈ ಬೆನ್ನಲ್ಲೆ ಇಶಾನ್ ಕಿಶನ್ (31 ರನ್) ಔಟಾದರು.

ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 28 ರನ್ (19 ಎಸೆತ), ಕೀರನ್ ಪೊಲಾರ್ಡ್ ಔಟಾಗದೆ 25 ರನ್ (13 ಎಸೆತ) ಹಾಗೂ ಕೃನಾಲ್ ಪಾಂಡ್ಯ ಔಟಾಗದೆ 20 ರನ್‌ (4 ಎಸೆತ) ಚಚ್ಚಿದರು. ಹೈದರಾಬಾದ್ ತಂಡದ ಪರ ಸಂದೀಪ್ ಶರ್ಮ, ಸಿದ್ಧಾರ್ಥ್​ ಕೌಲ್ ತಲಾ 2 ವಿಕೆಟ್ ಕಿತ್ತರೆ, ರಶೀದ್ ಖಾನ್ ಒಂದು ವಿಕೆಟ್ ಪಡೆದರು. ಇತ್ತ ಯಾವುದೇ ವಿಕೆಟ್ ಪಡೆಯದಿದ್ದರೂ ಟಿ. ನಟರಾಜನ್ ಅವರು ರನ್ ಏರಿಕೆಯನ್ನು ಕಂಟ್ರೋಲ್ ಮಾಡಿದರು. ಅವರು 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್‌ ನೀಡಿದರು.

Edited By : Vijay Kumar
PublicNext

PublicNext

04/10/2020 05:24 pm

Cinque Terre

66.32 K

Cinque Terre

9

ಸಂಬಂಧಿತ ಸುದ್ದಿ