ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೆಲುವಿನ ಓಟ ಆರಂಭಿಸಲು ಕೋಲ್ಕತ್ತಾ ನೈಟ್ ರೈಡರ್ಸ್ ಉತ್ಸುಕವಾಗಿದ್ದರೆ, ಎರಡನೇ ಪಂದ್ಯದಲ್ಲಿಯಾದರು ಗೆಲುವಿನ ಖಾತೆ ತೆರೆಯಲು ಮುಂಬೈ ಇಂಡಿಯನ್ಸ್ ಎದುರು ನೋಡುತ್ತಿದೆ.
ಅಬುಧಾಬಿಯ ಶೇಖ್ ಜಯೇದ್ ಮೈದಾನದಲ್ಲಿ ಇಂದು ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಎರಡು ಬಾರಿ ಕಪ್ ಗೆದ್ದಿರುವ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ಈಗಾಗಲೇ ಬಲಿಷ್ಠ ತಂಡಗಳ ಸಾಲಿಗೆ ಸೇರಿದೆ. ಇತ್ತ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ವಿರುದ್ಧ ಅತಿ ಹೆಚ್ಚು ಬಾರಿ ಸೋಲು ಕಂಡಿದೆ.
ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಕಳೆದ ಎಲ್ಲಾ 12 ಆವೃತ್ತಿಗಳಲ್ಲಿ 25 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ ಮುಂಬೈ ಕೇವಲ 9 ಪಂದ್ಯಗಳಲ್ಲಿ ಗೆದ್ದರೆ, ಕೆಕೆಆರ್ ಬರೋಬ್ಬರಿ 19 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಮುಂಬೈ ವಿರುದ್ಧ ಗೆಲುವಿನ ದಾಖಲೆ ಹೊಂದಿರುವ ಕೆಕೆಆರ್ ಇಂದು ಕೂಡ ಜಯ ಸಾಧಿಸಿ ಶುಭಾರಂಭ ಮಾಡುವ ನಿರೀಕ್ಷಿ ಇದೆ.
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್, ಸೌರಭ್ ತಿವಾರಿ/ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕಥರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಟ್/ನಥಾನ್ ಕಾಲ್ಟರ್, ಜಸ್ ಪ್ರೀತ್ ಬುಮ್ರಾ.
ಕೆಕೆಆರ್ ಸಂಭಾವ್ಯ ತಂಡ: ಶುಭಮಾನ್ ಗಿಲ್, ಸುನೀಲ್ ನಾರಾಯಣ್, ನಿತೇಶ್ ರಾಣಾ, ದಿನೇಶ್ ಕಾರ್ತಿಕ್ (ನಾಯಕ, ವಿಕೀ), ಇವೊಯಿನ್ ಮಾರ್ಗನ್, ಆಂಡ್ರೆ ರಸೆಲ್, ರಿಂಕು ಸಿಂಗ್/ ರಾಹುಲ್ ತ್ರಿಪಾಠಿ, ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ/ಶಿವಂ ಮಾವಿ, ಪ್ರಸಿದ್ಧ ಕೃಷ್ಣ.
PublicNext
23/09/2020 03:03 pm