ಅಬುಧಾಬಿ: ಇನ್ನಿಂಗ್ಸ್ ಆರಂಭದಲ್ಲಿ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ನಿಧಾಗತಿಯ ಬ್ಯಾಟಿಂಗ್‌ನಿಂದಾಗಿ ಸನ್ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ಗೆ 163 ರನ್‌ಗಳ ಗುರಿ ನೀಡಿದೆ.
ಅಬುಧಾಬಿಯ ಶೇಖ್ ಝಾಯದ್ ಸ್ಟೇಡಿಯಂನಲ್ಲಿ ಇಂದು ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು ಜಾನಿ ಬೈರ್ಸ್ಟೋವ್ 53 ರನ್ (48 ಎಸೆತ, 2 ಬೌಂಡರಿ, 1 ಸಿಕ್ಸ್), ಡೇವಿಡ್ ವಾರ್ನರ್ 45 ರನ್ (33 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಕೇನ್ ವಿಲಿಯಮ್ಸನ್ 41 ರನ್ (26 ಎಸೆತ, 5 ಬೌಂಡರಿ) ಸಹಾಯದಿಂದ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ ಐದು ಓವರಿನಲ್ಲಿ ಈ ಜೋಡಿ ಕೇವಲ ಒಂದು ಬೌಂಡರಿ ಬಾರಿಸಿದರೆ, ಸಿಕ್ಸ್ ಖಾತೆ ತೆರೆಯಲೇ ಇಲ್ಲ. ಅಷ್ಟೇ ಅಲ್ಲದೆ ಮೊದಲ ಆರು ಓವರ್ಗಳಲ್ಲಿ ಕೇವಲ 38 ರನ್ ಮಾತ್ರ ಗಳಿಸಿತು.
ಬಿರುಸಿನ ಬ್ಯಾಟಿಂಗ್ ಆರಂಭಿಸಿದ ನಾಯಕ ವಾರ್ನರ್ 45 ರನ್ ಗಳಿಸಿದ್ದಾಗ ವಿಕೆಟ್ ಕಳೆದುಕೊಂಡರು. ಈ ಬೆನ್ನಲ್ಲೇ ಮೈದಾನಕ್ಕಿಳಿಸ ಮನೀಶ್ ಪಾಂಡ್ಯೆ 5 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಜಾನಿ ಬೈರ್ಸ್ಟೋವ್ ಜೊತೆಗೂಡಿ ಕೇನ್ ವಿಲಿಯಮ್ಸನ್ ಉತ್ತಮ ಇನ್ನಿಂಗ್ಸ್ ಕಟ್ಟಿತು. ಈ ಜೋಡಿಯು ಮೂರನೇ ವಿಕೆಟ್ ನಷ್ಟಕ್ಕೆ 52 ರನ್‌ಗಳ ಕೊಡುಗೆ ನೀಡಿತು. ಕೊನೆಯ ಎರಡು ಓವರಿನಲ್ಲಿ ಹೈದರಾಬಾದ್ ತಂಡವು 17 ರನ್ ಗಳಿಸಿತು.
PublicNext
29/09/2020 09:30 pm