ಅಬುಧಾಬಿ: ಮನೀಷ್ ಪಾಂಡ್ಯೆ ಅರ್ಧಶತಕ, ನಾಯಕ ಡೇವಿಡ್ ವಾರ್ನರ್ ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತಾ ನೈಟ್‌ರೈಡರ್ 143 ರನ್‌ಗಳ ಗುರಿಯನ್ನು ನೀಡಿದೆ.
ಅಬುಧಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ನ 8ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್ ಮನೀಷ್ ಪಾಂಡ್ಯೆ 51 ರನ್ (38 ಎಸೆತ, 3 ಬೌಂಡರಿ, 2 ಸಿಕ್ಸರ್), ಡೇವಿಡ್ ವಾರ್ನರ್ 36 ರನ್ (30 ಎಸೆತ, 2 ಬೌಂಡರಿ, 1 ಸಿಕ್ಸ್) ಹಾಗೂ ವೃದ್ಧಿಮಾನ್ ಸಾಹ 30 ರನ್ (31 ಎಸೆತ, 1 ಬೌಂಡರಿ, 1 ಸಿಕ್ಸ್) ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲು ಶಕ್ತವಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಎಸ್ಹೆಚ್ಆರ್ ನಾಯಕ ಡೇವಿಡ್ ವಾರ್ನರ್ ಅವರು ಜಾನಿ ಬೈರ್ಸ್ಟೋವ್ ಮೈದಾನಕ್ಕೆ ಇಳಿದರು. ಆದರೆ ಆರಂಭದಲ್ಲಿ ಆಘಾತಕ್ಕೆ ತುತ್ತಾಯಿತು. ಪ್ಯಾಟ್ ಕಮಿನ್ಸ್ ಎಸೆದ ನಾಲ್ಕನೇ ಓವರ್ನ ಕೊನೆಯ ಬಾಲ್ನ್ನು ಹಿಮ್ಮೆಟ್ಟುವಲ್ಲಿ ಎಡವಿದ ಬೈರ್ಸ್ಟೋವ್ (5 ರನ್) ಕ್ಲೀನ್ ಬೌಲ್ಡ್ ಆದರು. ಈ ಬಳಿಕ ಜೊತೆಗೂಡಿದ ವಾರ್ನರ್ -ಮನೀಷ್ ಪಾಂಡೆ ಜೋಡಿ ಎರಡನೇ ವಿಕೆಟ್ ಗೆ 31 ರನ್‌ಗಳ ಜೊತೆಯಾಟದೊಂದಿಗೆ 9 ಓವರ್‌ಗಳಲ್ಲಿ ತಂಡದ ಮೊತ್ತವನ್ನು 59 ಕ್ಕೇರಿಸಿದರು.
ಉತ್ತಮ ಬ್ಯಾಟಿಂಗ್ ಫಾರ್ಮ್ ನಲ್ಲಿದ್ದ ವಾರ್ನರ್ 10ನೇ ಓವರ್ನಲ್ಲಿ ಸುಲಭ ಕ್ಯಾಚ್ ನೀಡಿ ವಾರ್ನರ್ (36 ರನ್) ಪೆವಿಲಿಯನ್ ಗೆ ಮರಳಿದರು. ಬಳಿಕ ಮನೀಷ್ ಪಾಂಡ್ಯೆ ಹಾಗೂ ವೃದ್ಧಿಮಾನ್ ಸಾಹ ಜೋಡಿಯು ಉತ್ತಮ ಇನ್ನಿಂಗ್ಸ್ ಕಟ್ಟಿತು. ಈ ಜೋಡಿಯು ಮೂರನೇ ವಿಕೆಟ್‌ಗೆ 62 ರನ್ ಕೊಡುಗೆ ನೀಡಿತು. 51 ರನ್ ಗಳಿಸಿದ್ದ ಮನೀಷ್ ಪಾಂಡ್ಯೆ 18ನೇ ಓವರಿನಲ್ಲಿ ಬೌಲರ್ ಆಂಡ್ರೆ ರಸೆಲ್ ಕೈಗೆ ಸುಭವಾಗಿ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಕೊನೆಯ ಎರಡು ಓವರಿನಲ್ಲಿ ಸಹಾ ಹಾಗೂ ಮೊಹಮ್ಮದ್ ನಬಿ ಬಿರುಸಿನ ಆಟವನ್ನು ತೋರಲು ವಿಫಲರಾದರು.
PublicNext
26/09/2020 09:28 pm