ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಮನ್‌ವೆಲ್ತ್ ಗೇಮ್ಸ್: ಭಾರತಕ್ಕೆ ಮತ್ತೊಂದು ಚಿನ್ನ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಪದಕ ಬೇಟೆ ಆರಂಭಿಸಿದ್ದಾರೆ. ಸದ್ಯ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಂದಿದೆ‌. ಈ ಮೂಲಕ 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ ದೊರೆತಂತಾಗಿದೆ.

ವೇಟ್ ಲಿಫ್ಟಿಂಗ್ 67ಕೆಜಿ ವಿಭಾಗದಲ್ಲಿ ಜೆರೆಮಿ ಲಲ್ರಿನ್ನುಂಗ ಅವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಅವರು‌ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೇಶದ ಪರವಾಗಿ ಇತಿಹಾಸ ಸೃಷ್ಟಿಸಿದ್ದಾರೆ. ನಿನ್ನೆ ಶನಿವಾರವಷ್ಟೇ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಅವರು ಚಿನ್ನದ‌ ಪದಕ ಗೆದ್ದಿದ್ದರು.

Edited By : Nagaraj Tulugeri
PublicNext

PublicNext

31/07/2022 05:30 pm

Cinque Terre

42.61 K

Cinque Terre

1

ಸಂಬಂಧಿತ ಸುದ್ದಿ