ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಲು ವ್ಯಕ್ತಿಯೋರ್ವ ಮಾಡಿದ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ದೃಶ್ಯ ನೋಡುಗರ ಮೈ ಜುಮ್ ಎನ್ನುವಂತಿದೆ.
ರಾಫೆಲ್ ಜುಗ್ನೋ ಬ್ರಿಡಿ ಎಂಬ ವ್ಯಕ್ತಿಯು ಮಾಡಿದ್ದು ಸಾಮಾನ್ಯವಾದ ಸಾಹಸವಲ್ಲ ಬಿಡಿ, ಈತ ಗಾಳಿಯಲ್ಲಿ ಹಾರಾಡುವ ಎರಡು ಬಿಸಿ ಗಾಳಿಯ ಬಲೂನ್ (ಪ್ಯಾರಶೂಟ್)ಗಳ ನಡುವೆ ಕಟ್ಟಿದ ಹಗ್ಗದ ಮೇಲೆ ನಡೆಯುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.
"ರಾಫೆಲ್ ಜುಗ್ನೊ ಬ್ರಿಡಿ ಅವರ 1,901 ಮೀ ಎಂದರೆ ಸರಿ ಸುಮಾರು 6,236 ಅಡಿ ಎತ್ತರದ ಸ್ಲಾಕ್‌ಲೈನ್ ನಡಿಗೆ" ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವಿಡಿಯೋವನ್ನು ಪೋಸ್ಟ್ ಮಾಡುವಾಗ ಶೀರ್ಷಿಕೆಯೊಂದನ್ನು ಬರೆದಿದ್ದಾರೆ. ಈ ಕ್ಲಿಪ್‌ನಲ್ಲಿ ರಾಫೆಲ್ ಬಹಳ ಜಾಗರೂಕತೆಯಿಂದ ಒಂದು ಪ್ಯಾರಶೂಟ್ನಿಂದ ಇನ್ನೊಂದು ಪ್ಯಾರಶೂಟ್ ಇರುವುದರ ಕಡೆಗೆ ತಲುಪಲು ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತೋರಿಸುತ್ತದೆ.
PublicNext
08/04/2022 08:23 pm