ರಾವಲ್ಪಿಂಡಿ(ಪಾಕಿಸ್ತಾನ): ಪಾಕ್ ಕ್ರಿಕೆಟ್ ತಂಡದ ವಿರುದ್ಧ ಆಡಲು ನ್ಯೂಝಿಲ್ಯಾಂಡ್ ತಂಡ ಪಾಕಿಸ್ತಾನಕ್ಕೆ ಬಂದಿಳಿದಿತ್ತು. ಈ ನಡುವೆ ಪಂದ್ಯ ಆರಂಭಕ್ಕೂ ಮುನ್ನವೇ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಗಲಾಟೆ ಶುರುವಾಗಿದೆ. ನಂತರ ಪಂದ್ಯ ರದ್ದುಗೊಳಿಸಿದ ನ್ಯೂಝಿಲ್ಯಾಂಡ್ ತಂಡ ವಾಪಸ್ ತಮ್ಮ ದೇಶಕ್ಕೆ ಹೋಗಿದೆ.
ಇದರ ವಿರುದ್ಧ ಆಕ್ರೋಶಿತರಾದ ಪಾಕ್ ಕ್ರಿಕೆಟ್ ತಂಡದ ಮಾಜಿ ಬೌಲರ್ ಶೋಯಬ್ ಅಖ್ತರ್ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಆಕ್ರೋಶಿತರಾಗಿದ್ದಾರೆ. ಅವರು ಪಾಕಿಸ್ತಾನ ಕ್ರಿಕೆಟ್ ಅನ್ನು ಕೊಂದೇಬಿಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
PublicNext
18/09/2021 03:18 pm