ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ್ಯೂಜಿಲ್ಯಾಂಡ್ ಪ್ರಧಾನಿಗೆ ಕರೆ ಮಾಡಿದ ಪಾಕ್ ಪ್ರಧಾನಿ: ಹೇಳಿದ್ದೇನು?

ರಾವಲ್ಪಿಂಡಿ(ಪಾಕಿಸ್ತಾನ): ಪಂದ್ಯ ಆರಂಭಕ್ಕೂ ಮುನ್ನ ಗಲಾಟೆಯಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಬಂದಿದ್ದ ನ್ಯೂಜಿಲ್ಯಾಂಡ್ ತಂಡದ ಆಟಗಾರರು ಪಂದ್ಯವನ್ನು ರದ್ದುಗೊಳಿಸಿದ್ದಾರೆ. ಯಾರ ಮಾತಿಗೂ ಮಣಿಯದೇ ತಮ್ಮ ದೇಶಕ್ಕೆ ವಾಪಸ್ ಆಗಿದ್ದಾರೆ. ರಾವಲ್ಪಿಂಡಿಯಲ್ಲಿ ನಡೆದ ಗಲಾಟೆಯಿಂದಾಗಿ ಪಂದ್ಯದ ಆರಂಭವು ವಿಳಂಬವಾಯಿತು. ಜೊತೆಗೆ ಇದರಿಂದ ಆಟಗಾರರನ್ನು ತಮ್ಮ ಕೋಣೆಗಳಲ್ಲಿ ಉಳಿಯುವಂತೆ ಹೇಳಲಾಯಿತು. ಈ ಅಪಾಯಕಾರಿ ಸನ್ನಿವೇಶ ಮನಗಂಡ ನ್ಯೂಜಿಲೆಂಡ್ ಈ ಪ್ರವಾಸವನ್ನು ರದ್ದು ಮಾಡಿದೆ. ಭದ್ರತಾ ಕಾರಣಗಳಿಂದಾಗಿ ಈ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ನ್ಯೂಜಿಲೆಂಡ್ ಹೇಳಿದೆ.

ಪಾಕಿಸ್ತಾನಕ್ಕೆ ಬಂದ ನ್ಯೂಜಿಲ್ಯಾಂಡ್ ತಂಡವನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಕಿವಿ ತಂಡದ ಆಟಗಾರರು ಕೂಡ ಪಾಕ್ ತಂಡವನ್ನು ಸಾಕಷ್ಟು ಹೊಗಳಿದರು. ಆದರೆ, ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನದೊಳಗಿನ ನೈಜ ಮುಖ ಮುನ್ನೆಲೆಗೆ ಬಂದಿತು. ಇದನ್ನು ನೋಡಿದ ನ್ಯೂಜಿಲ್ಯಾಂಡ್ ತಂಡವು ಗಾಬರಿಗೊಂಡು ಕೂಡಲೇ ಪಾಕ್​ ನೆಲದಿಂದ ಕಾಲ್ಕಿಳಲು ಆರಂಭಿಸಿದೆ.

ಅಂದಹಾಗೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನ್ಯೂಜಿಲ್ಯಾಂಡ್ ಪ್ರಧಾನಿಯೊಂದಿಗೆ ಫೋನಿನಲ್ಲಿ ಮಾತನಾಡಿ ತನ್ನ ಭದ್ರತಾ ವ್ಯವಸ್ಥೆಯನ್ನು ವಿಶ್ವದ ಅತ್ಯುತ್ತಮ ಎಂದು ಹೇಳಿದರು. ಜೊತೆಗೆ ಕಿವಿ ತಂಡಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಆದರೆ, ಪಾಕ್​ ಪ್ರಧಾನಿಯ ಮಾತಿಗೆ ಸೊಪ್ಪು ಹಾಕದ ನ್ಯೂಜಿಲೆಂಡ್ ಕೂಡಲೇ ಆಟಗಾರರನ್ನು ಪಾಕಿಸ್ತಾನದಿಂದ ಹೊರಟು ಬರುವಂತೆ ಆದೇಶ ಹೊರಡಿಸಿದೆ.

Edited By : Nagaraj Tulugeri
PublicNext

PublicNext

18/09/2021 09:56 am

Cinque Terre

48.28 K

Cinque Terre

5