ಕರಾಚಿ: ಭಾರತವು 2021 ಐಸಿಸಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಲಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡ, ಅಭಿಮಾನಿಗಳು ಮತ್ತು ಪತ್ರಕರ್ತರಿಗೆ ವೀಸಾ ನೀಡುವುದಾಗಿ ಭಾರತ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಕ್ರಿಕಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಒತ್ತಾಯಿಸಿದ್ದಾರೆ.
ಲಾಹೋರ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಬಿಗ್ ತ್ರೀ ಎನ್ನುವ ಮನೋಭಾವ ಕೊನೆಯಾಗಬೇಕು. ಎಲ್ಲರಿಗೂ ಸಮಾನ ವೇದಿಕೆ ಇರಬೇಕು. ನಮ್ಮ ತಂಡಕ್ಕೆ ವೀಸಾ ಭರವಸೆ ಕೊಟ್ಟರೆ ಸಾಲದು. ಇಲ್ಲಿಂದ ಪ್ರಯಾಣಿಸುವ ಅಭಿಮಾನಿಗಳು ಮತ್ತು ಕ್ರೀಡಾ ಪತ್ರಕರ್ತರಿಗೂ ವೀಸಾ ನೀಡುವ ಲಿಖಿತ ಭರವಸೆ ನೀಡಬೇಕು. ಈ ಸಂಬಂಧ ಐಸಿಸಿಗೆ ಪತ್ರ ಬರೆದಿದ್ದೇವೆ. ಮಾರ್ಚ್ ಅಂತ್ಯದೊಳಗೆ ವೀಸಾ ನೀಡಬೇಕು. ಇಲ್ಲದಿದ್ದರೆ ಯುಎಇಗೆ ವಿಶ್ವಕಪ್ ಟೂರ್ನಿ ಸ್ಥಳಾಂತರ ಮಾಡಬೇಕು'' ಎಂದು ಆಗ್ರಹಿಸಿದ್ದಾರೆ.
PublicNext
20/02/2021 10:53 pm