ಕಾಬೂಲ್ : ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ನಜೀಬ್ ತಾರಕೈ (29) ಮೃತಪಟ್ಟಿದ್ದಾರೆ.
ಅಫ್ಘಾನಿಸ್ತಾನದ ಜಲಾಲಾಬಾದ್ ನ ನಂಗಾಹಾರ್ ಬಳಿ ಕಳೆದ ಶುಕ್ರವಾರ ನಜೀಬ್ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಅವರಿಗೆ ಗುದ್ದಿದೆ.
ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಕೋಮಾಗೆ ತೆರಳಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಈ ಬಗ್ಗೆ ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದೆ.
ಆರಂಭಿಕ ಬ್ಯಾಟ್ಸ್ ಮನ್ ಹಾಗೂ ಉತ್ತಮ ವ್ಯಕ್ತಿಯನ್ನು ನಾವು ಕಳೆದುಕೊಂಡಿರುವುದಕ್ಕೆ ನಾವು ಸಂತಾಪ ಸೂಚಿಸುತ್ತಿದ್ದೇವೆ. ದೇವರು ಅವರ ಮೇಲೆ ಕರಣು ತೋರಲಿ ಎಂದು ಬರೆದುಕೊಂಡಿದೆ.
2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಜೀಬ್ ಪದಾರ್ಪಣೆ ಮಾಡಿದ್ದರು. ಏಷ್ಯಾಕಪ್ ನಲ್ಲಿ ಮೊದಲ ಬಾರಿಗೆ ಬಾಂಗ್ಲಾ ದೇಶದ ವಿರುದ್ಧ ಬ್ಯಾಟ್ ಬೀಸಿದ್ದರು.
ಅಪ್ಘಾನಿಸ್ತಾನ ಪರ 12 ಟಿ 20ಗಳನ್ನು ಇವರು ಆಡಿದ್ದಾರೆ.
PublicNext
06/10/2020 11:59 am