ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2020: ಇಂದು ಅಕಾಡದಲ್ಲಿ ಸೆಣಸಾಡಲಿವೆ ಮುಂಬೈ Vs ಕೋಲ್ಕತ ನೈಟ್ ರೈಡರ್ಸ್

ಅಬುಧಾಬಿ : 13ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್ ಕೆ ವಿರುದ್ಧ ಮುಗ್ಗರಿಸಿದ ಮುಂಬೈ ಇಂಡಿಯನ್ಸ್ ಗೆ ಇಂದು ನಡೆಯಲಿರುವ ಪಂದ್ಯ ಬಹುಮುಖ್ಯ.

ಅದೇ ರೀತಿ 13ನೇ ಆವೃತ್ತಿಯಲ್ಲಿ ಚೊಚ್ಚಲದ ಪಂದ್ಯದ ಪಾದಾರ್ಪಣೆ ಮಾಡುತ್ತಿರುವ ಕೆಕೆಆರ್ ಗೂ ಈ ಪಂದ್ಯ ಕೂಡಾ ಅಷ್ಟೆ ಮುಖ್ಯ ಹಾಗಾಗಿ ಇಂದು ನಡೆಯಲಿರುವ ಪಂದ್ಯ ಅತ್ಯಂತ ರೂಚಕತೆಯಿಂದ ಕೂಡಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡ ವಿರುದ್ಧ ಮುಂಬೈ ಸೆಣಸಾಟ ನಡೆಸಲಿದ್ದು, ಗೆಲುವಿನ ಖಾತೆ ಆರಂಭಿಸುವ ನಿರೀಕ್ಷೆಯಲ್ಲಿದೆ.

ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಕೆಕೆಆರ್ಗಿಂತ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿದ್ದು, ಇದುವರೆಗೂ 2 ತಂಡಗಳು ಐಪಿಎಲ್ ನಲ್ಲಿ 25 ಬಾರಿ ಮುಖಾಮುಖಿಯಾಗಿದ್ದು ಕೆಕೆಆರ್ 19 ಬಾರಿ ಗೆಲುವು ಸಾಧಿಸಿದೆ.

ಆದರೆ, ಅರಬ್ಬರ ನಾಡಿನಲ್ಲಿ ಮುಂಬೈ ಇದುವರೆಗೂ ಸತತ 6 ಪಂದ್ಯಗಳಲ್ಲಿ ಸೋಲುಂಡಿದೆ. ಟೂರ್ನಿಯಲ್ಲಿ ಕಮ್ಬ್ಯಾಕ್ ಆಗಬೇಕಾದರೆ ಮುಂಬೈ ಈ ಸೋಲಿನ ಸುಳಿಯಿಂದ ಹೊರಬರಬೇಕಿದೆ.

ಕೆಕೆಆರ್

ಸುನಿಲ್ ನರೇನ್, ಶುಭ್ಮನ್ ಗಿಲ್, ನಿತೇಶ್ ರಾಣಾ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್(ನಾಯಕ), ಆಂಡ್ರೆ ರಸೆಲ್, ಸಿದ್ಧೇಶ್ ಲ್ಯಾಡ್, ಪ್ಯಾಟಿ ಕಮಿನ್ಸ್, ಕುಲದೀಪ್ ಯಾದವ್, ಪ್ರಸಿದ ಕೃಷ್ಣ, ಶಿವಂ ಮಾವಿ/ ಕಮಲೇಶ್ ನಾಗರಕೋಟಿ

ಮುಂಬೈ

ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ ಪ್ಯಾಟಿನ್ಸನ್, ರಾಹುಲ್ ಚಹಾರ್, ಜಸ್ಟ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

Edited By : Nirmala Aralikatti
PublicNext

PublicNext

23/09/2020 09:36 am

Cinque Terre

145.95 K

Cinque Terre

142