ಅಬುಧಾಬಿ : ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿ 10 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿ ಮತ್ತೆ ಎದುರಾಳಿ ತಂಡಗಳನ್ನು ಮಣಿಸಲು ಸಜ್ಜಾಗಿದೆ.
ಇಂದು ಅಬುಧಾಬಿಯಲ್ಲಿ ನಡೆಯುವ ಐಪಿಎಲ್ ನ 21ನೇ ಪಂದ್ಯದಲ್ಲಿ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.
ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ತಂಡ 2 ಪಂದ್ಯದಲ್ಲಿ ಜಯ ಕಂಡು 2 ಪಂದ್ಯದಲ್ಲಿ ಸೋತು 4 ಪಾಯಿಂಟ್ ಪಡೆಯುವ ಮೂಲಕ(-0.121) ನೆಟ್ ರನ್ ರೇಟ್ ನಿಂದ ಅಂಕಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ.
ಅದೇ ರೀತಿ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಪಂದ್ಯಗಳಲ್ಲಿ 2 ಪಂದ್ಯದಲ್ಲಿ ಗೆದ್ದು 3 ಪಂದ್ಯದಲ್ಲಿ ಸೋಲು ಕಂಡಿದೆ.
(-0.342) ರನ್ ರೇಟ್ ಮೂಲಕ 5ನೇ ಸ್ಥಾನದಲ್ಲಿದೆ. ಇಂದು ಉಭಯ ತಂಡಗಳಿಂದ ರನ್ ಗಳ ಸುರಿಮಳೆ ಹರಿಯುವ ಸಾಧ್ಯತೆ ಹೆಚ್ಚಿದೆ.
PublicNext
07/10/2020 04:10 pm