ಲಕ್ಸಂಬರ್ಗ್: ಇಲ್ಲೊಂದು ವಿಚಿತ್ರ ಸ್ಪರ್ಧೆ ಇತ್ತು. ಇಲ್ಲಿ ಭಾಗವಹಿಸೋರು ತಲೆಗೆ ಸ್ಟೀಲ್ ಹೆಲ್ಮೆಟ್ ಧರಿಸಿಬೇಕು. ಪ್ಯಾನ್ ಮೂಲಕ ಒಬ್ಬರಿಗೆ ಒಬ್ಬರು ಹೊಡೆದುಕೊಳ್ಳಬೇಕು. ಯಾರು ಕೆಳಗೆ ಬೀಳ್ತಾರೋ ಅವರು ಸೋತಂತೆ. ಇದು ನೋಡಲು ಮಜಾ ಕೊಡುತ್ತದೆ. ಆದರೆ, ಸ್ಪರ್ಧಿಗಳಿಗೂ ಇದು ಖುಷಿಕೊಟ್ಟಂತೆ ಕಾಣುತ್ತದೆ.
ಹೌದು. ಲಕ್ಸಂಬರ್ಗ್ ನಲ್ಲಿ ನಡೆದ ಈ ಪ್ಯಾನ್ ಸ್ಪರ್ಧೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎನ್‌ಬಿಎ ಆಟಗಾರ ರೆಕ್ಸ್ ಚಾಪ್ಮನ್ ಕೂಡ ಈ ವೀಡಿಯೋ ಶೇರ್ ಮಾಡಿದ್ದಾರೆ.
ಚಿತ್ರ-ವಿಚಿತ್ರ ಅನಿಸೋ ಈ ಆಟದಲ್ಲಿ ಬೀಳೋ ಏಟು ಸಖತ್ ಸೌಂಡ್ ಮಾಡುತ್ತವೆ. ಕಳಗೆ ಬಿದ್ದ ವ್ಯಕ್ತಿ ಸೋತು ಹೋಗ್ತಾನೆ. ಗೆದ್ದವ ಚೇರ್ ಮೇಲೆ ಕುಳಿತು ಬೀಗುತ್ತಾನೆ. ವಿಶೇಷ ಅನಿಸಿದರೂ ಈ ಆಟ ವಿಚಿತ್ರವೇ ಸರಿ.
PublicNext
22/06/2022 10:29 pm