ರೋಹ್ಟರ್: ಹರಿಯಾಣದ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಧರ್ಮೇಂದ್ರ ಒಂದೇ ಒಂದು ನಿಮಿಷದಲ್ಲಿ ಬರೋಬ್ಬರಿ 150 ತೆಂಗಿನಕಾಯಿಯನ್ನ ಹೊಡೆದು ಎಲ್ಲರ ಗಮನ ಸೆಳೆದ್ದಾನೆ.
ಗಿನ್ನೀಸ್ ದಾಖಲೆ ಮಾಡಲೆಂದೇ ಈ ಒಂದು ಸಾಹಸಕ್ಕೆ ಧರ್ಮೇಂದ್ರ ಕೈ ಹಾಕಿದ್ದಾರೆ. ದಾಖಲೆ ಆಯಿತೋ ಇಲ್ವೋ ಗೊತ್ತಿಲ್ಲ. ಆದರೆ, ಈ ಹಿಂದೆ ಕೇರಳದ ಯುವಕ ಒಂದು ನಿಮಿಷದಲ್ಲಿ 122 ತೆಂಗಿನ ಕಾಯಿ ಒಡೆದಿದ್ದ. ಆ ದಾಖಲೆಯನ್ನ ಈಗ ಧರ್ಮೇಂದ್ರ ಬ್ರೇಕ್ ಮಾಡಿದ್ದಾರೆ.
ಅಂದ್ಹಾಗೆ ಧರ್ಮೇಂದ್ರ ಲಾಕ್ ಡೌನ್ ಟೈಮ್‌ನಲ್ಲಿ ಈ ಒಂದು ಹವ್ಯಾಸ ಬೆಳೆಸಿಕೊಂಡಿದ್ದಾರೆ. ಯುಟ್ಯೂಬ್ ನಲ್ಲಿ ತೆಂಗಿನ ಕಾಯಿ ಒಡೆಯೋದನ್ನ ನೋಡಿದ್ದ ಧರ್ಮೇಂದ್ರ, ಈಗ ತಾವೇ ತುಂಬಾ ಸಲೀಸ್ ಆಗಿಯೇ ಕಾಯಿ ಒಡೆದು ಎಲ್ಲರ ದಿಲ್ ಕದ್ದು ಬಿಟ್ಟಿದ್ದಾರೆ.
PublicNext
21/04/2022 02:13 pm